ಕರ್ನಾಟಕ

karnataka

ETV Bharat / state

ಕಬ್ಬರಗಿ ಗ್ರಾಮದ ಯುವಕನಿಗೆ ಕೊರೊನಾ ದೃಢ: 46 ಜನರಿಗೆ ಹೋಂ ಕ್ವಾರಂಟೈನ್ - Koppal total covid cases

ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಯುವಕನಿಗೆ ಕೊರೊನಾ ದೃಢವಾದ ಹಿನ್ನೆಲೆಯಲ್ಲಿ 19 ಜನ ಪ್ರಾಥಮಿಕ ಹಾಗೂ 27 ಜನ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

Koppal
Koppal

By

Published : Jul 5, 2020, 5:09 PM IST

ಕುಷ್ಟಗಿ (ಕೊಪ್ಪಳ): ಕುಷ್ಟಗಿ ತಾಲೂಕಿನ ಕಬ್ಬರಗಿ ಗ್ರಾಮದ ಯುವಕನಿಗೆ ಕೊರೊನಾ ಕಾಣಿಸಿಕೊಂಡ ಹಿನ್ನೆಲೆಯಲ್ಲಿ 19 ಜನ ಪ್ರಾಥಮಿಕ ಹಾಗೂ 27 ಜನ ದ್ವಿತೀಯ ಸಂಪರ್ಕಿತರನ್ನು ಗುರುತಿಸಿ ಹೋಂ ಕ್ವಾರಂಟೈನ್ ನಲ್ಲಿರುವಂತೆ ಆರೋಗ್ಯ ಇಲಾಖೆ ಸೂಚಿಸಿದೆ.

ಮೂಲಗಳ ಪ್ರಕಾರ, ಮಂಗಳೂರಿನಿಂದ ಜೂನ್ 27 ಕ್ಕೆ ಯುವಕ ಕಬ್ಬರಗಿಗೆ ಆಗಮಿಸಿದ್ದು, ಜು.1ಕ್ಕೆ ಗೋತಗಿ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾನೆ. ಜುಲೈ3 ಕ್ಕೆ ಯುವಕನ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ನೀಡಿದ್ದರೂ ಸಹ ತನಗೆ ಯಾವುದೇ ಲಕ್ಷಣಗಳಿಲ್ಲ ಎಂದು ಅದೇ ಓಣಿಯ ದೇವಸ್ಥಾನ, ಇತರೆಡೆಗಳಲ್ಲಿ ಸಂಚರಿಸಿದ್ದಾನೆ ಎನ್ನಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಕಬ್ಬರಗಿ ಪಿಡಿಒ ನಿಂಗಪ್ಪ ಮೂಲಮನಿ, ಗ್ರಾಮದ ಸೋಂಕಿತರ ಮನೆಯ ಅಕ್ಕಪಕ್ಕದ 14 ಮನೆಗಳನ್ನು ಕಂಟೇನ್‌ಮೆಂಟ್ ವ್ಯಾಪ್ತಿಗೆ ತೆಗೆದುಕೊಂಡು ಸ್ವಚ್ಚತೆ, ಸ್ಯಾನಿಟೈಸರ್ ಸಿಂಪಡಿಸುವುದು ಸೇರಿದಂತೆ ಇತರೆ ಕ್ರಮಗಳನ್ನು ಕೈಗೊಂಡು ಜನ ಸಂಚಾರ ನಿರ್ಬಂಧಿಸಲಾಗಿದೆ. ಸೋಂಕಿತ ಮನೆ ಹಾಗೂ ಪಕ್ಕದ ಮನೆಯವರಿಗೆ ಅಹಾರ ಕಿಟ್ ವಿತರಿಸಿರುವುದಾಗಿ ತಿಳಿಸಿದರು.

ABOUT THE AUTHOR

...view details