ಗಂಗಾವತಿ: ನಗರದ ಕೊರೊನಾ ಪಾಸಿಟಿವ್ ಸೋಂಕಿತರೊಬ್ಬರು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಅವರ ನೇರ ಸಂಪರ್ಕಕ್ಕೆ ಬಂದಿದ್ದಾರೆ ಎನ್ನಲಾಗಿದ್ದು, ಇದೀಗ ಸ್ವತಃ ಡಿಸಿಯವರಿಗೆ ಸೋಂಕಿತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿರುವ ಆತಂಕ ಎದುರಾಗಿದೆ.
ಕೊಪ್ಪಳ ಡಿಸಿಯೊಂದಿಗೆ ನೇರ ಸಂಪರ್ಕಕ್ಕೆ ಬಂದಿದ್ದ ಸೋಂಕಿತ...ಹೆಚ್ಚಿದ ಆತಂಕ! - ಜಿಲ್ಲಾಧಿಕಾರಿ ವಿಕಾಸ ಕಿಶೋರ್ ಸುರಾಳ್ಕರ್
ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಯನ್ನು ಕೊರೊನಾ ಪಾಸಿಟಿವ್ ಸೋಂಕಿತ ವ್ಯಕ್ತಿಯನ್ನೊಳಗೊಂಡ ಇನ್ನಿಬ್ಬರ ಯುವಕರ ತಂಡ ಭೇಟಿಯಾಗಿ ಖುದ್ದು ಹೂಗುಚ್ಛ ನೀಡಿದ್ದಾರೆ ಎನ್ನಲಾಗಿದೆ.

DC vikas kishor suralkar
ನಗರದಲ್ಲಿ ನಡೆಯುತ್ತಿದ್ದ ನಾನಾ ಯೋಜನೆಗಳಲ್ಲಿನ ಕಾಮಗಾರಿಗಳ ಪ್ರಗತಿ ಪರಿಶೀಲನೆಗೆ ಆಗಮಿಸಿದ್ದ ಜಿಲ್ಲಾಧಿಕಾರಿಯನ್ನು ಕೊರೊನಾ ಪಾಸಿಟಿವ್ ಸೋಂಕಿತ ವ್ಯಕ್ತಿಯನ್ನೊಳಗೊಂಡ ಇನ್ನಿಬ್ಬರ ಯುವಕರ ತಂಡ ಭೇಟಿಯಾಗಿ ಖುದ್ದು ಹೂಗುಚ್ಛ ನೀಡಿದ್ದಾರೆ ಎನ್ನಲಾಗಿದೆ.
ಈ ಪ್ರಕರಣ ಈಗ ಆರೋಗ್ಯ, ಕಂದಾಯ ಅಧಿಕಾರಿಗಳ ವಲಯದಲ್ಲಿ ಆತಂಕ್ಕೆ ಕಾರಣವಾಗಿದೆ. ಮನವಿ ಸ್ವೀಕರಿಸಲು, ಜನರ ದೂರುದುಮ್ಮಾನಗಳಿಗೆ ಸ್ಪಂದಿಸಲು ಜಿಲ್ಲಾಧಿಕಾರಿ ನಿತ್ಯ ನೂರಾರು ಜನರೊಂದಿಗೆ ನೇರ ಸಂಪರ್ಕಕ್ಕೆ ಬರುತ್ತಾರೆ. ಆದರೆ ಯಾರಿಗೆ ಕೊರೊನಾ ಇದೆ ಇಲ್ಲ ಎಂಬುವುದನ್ನು ಪತ್ತೆ ಹಚ್ಚುವುದು ಸಮಸ್ಯೆಯಾಗುತ್ತಿದೆ.