ಕರ್ನಾಟಕ

karnataka

ETV Bharat / state

ಕಾಂಗ್ರೆಸ್​​ ಫುಡ್​ ಕಿಟ್​ ವಿತರಣಾ ಕಾರ್ಯಕ್ರಮ: ಮಾಜಿ ಸಿಎಂ ಎದುರೇ ಕೋವಿಡ್​ ನಿಯಮ ಉಲ್ಲಂಘನೆ - ಶಾಸಕ ಕೆ ರಾಘವೇಂದ್ರ ಹಿಟ್ನಾಳ್

ಕಾಂಗ್ರೆಸ್​​ ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕ್ಷೇತ್ರದಲ್ಲಿ 15 ಸಾವಿರ ಫುಡ್ ಕಿಟ್ ಹಂಚುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಡವರಿಗೆ ಹಂಚಲು ವಾಹನಗಳಲ್ಲಿ ಫುಡ್ ಕಿಟ್​ಗಳನ್ನು ತುಂಬಿಸಿ ನಿಲ್ಲಿಸಲಾಗಿತ್ತು. ಕಿಟ್ ವಿತರಣಾ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೈದಾನದಲ್ಲಿದ್ದ ಜನರು ವಾಹನಗಳಲ್ಲಿದ್ದ ಫುಡ್ ಕಿಟ್​ಗಳನ್ನು ತೆಗೆದುಕೊಳ್ಳಲು ಮುಗಿಬಿದ್ದರು.

corona-guidelines-violation-in-koppal
ಮಾಜಿ ಸಿಎಂ ಸಿದ್ದರಾಮಯ್ಯ

By

Published : Jun 21, 2021, 4:37 PM IST

ಕೊಪ್ಪಳ: ನಗರದ ತಾಲೂಕು ಕ್ರೀಡಾಂಗಣದಲ್ಲಿ ಕಾಂಗ್ರೆಸ್​ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಫುಡ್​​ ಕಿಟ್​​​​​​​ ವಿತರಣಾ ಕಾರ್ಯಕ್ರಮದಲ್ಲಿ ಜನರು ಆಹಾರ ಸಾಮಗ್ರಿಗಳ ಕಿಟ್​​​ ಪಡೆಯಲು ಮುಗಿಬಿದ್ದ ಘಟನೆ ನಡೆಯಿತು. ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಮಾಯವಾಗಿ ಕೋವಿಡ್​​​ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿತ್ತು.

ಮಾಜಿ ಸಿಎಂ ಎದುರೆ ಕೋವಿಡ್​ ನಿಯಮ ಮಂಗಮಾಯ

ಶಾಸಕ ಕೆ. ರಾಘವೇಂದ್ರ ಹಿಟ್ನಾಳ್ ಅವರು ಕ್ಷೇತ್ರದಲ್ಲಿ 15 ಸಾವಿರ ಫುಡ್ ಕಿಟ್ ಹಂಚುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಡವರಿಗೆ ಹಂಚಲು ವಾಹನಗಳಲ್ಲಿ ಫುಡ್ ಕಿಟ್​ಗಳನ್ನು ತುಂಬಿಸಿ ನಿಲ್ಲಿಸಲಾಗಿತ್ತು. ಕಿಟ್ ವಿತರಣಾ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಮೈದಾನದಲ್ಲಿದ್ದ ಜನರು ವಾಹನಗಳಲ್ಲಿದ್ದ ಫುಡ್ ಕಿಟ್​ಗಳನ್ನು ತೆಗೆದುಕೊಳ್ಳಲು ಮುಗಿಬಿದ್ದು ಸಿಕ್ಕಷ್ಟು ತೆಗೆದುಕೊಂಡು ಹೋದರು.

ಈ ಸಂದರ್ಭದಲ್ಲಿ ಸಾಮಾಜಿಕ ಅಂತರ ಮಂಗಮಾಯವಾಗಿತ್ತು. ಅಲ್ಲದೆ, ಕಾರ್ಯಕ್ರಮಕ್ಕೂ ಮೊದಲು ಸಿದ್ದರಾಮಯ್ಯ ಅವರು ಗವಿಮಠಕ್ಕೆ ಭೇಟಿ ನೀಡಿದ ವೇಳೆಯೂ ನೂರಾರು ಜನರು ಮುತ್ತಿಕೊಂಡು ಕೋವಿಡ್​​ ನಿಯಮಗಳನ್ನು ಉಲ್ಲಂಘಿಸಿದ್ದರು.

ABOUT THE AUTHOR

...view details