ಕುಷ್ಟಗಿ (ಕೊಪ್ಪಳ):ಕುಷ್ಟಗಿ ತಾಲೂಕಿನ ಹೂಲಗೇರಾ ಗ್ರಾಮದ ಎಸ್‌ಬಿಐ ಉದ್ಯೋಗಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದ್ದು, ಬ್ಯಾಂಕ್ ಸೀಲ್ ಡೌನ್‌ಗೆ ಕ್ರಮ ವಹಿಸಲಾಗಿದೆ.
ಹೂಲಗೇರಾ SBI ಸಿಬ್ಬಂದಿಗೆ ವಕ್ಕರಿಸಿದ ಕೊರೊನಾ - Kushtagi koppala latest news
ಕಳೆದ ಶುಕ್ರವಾರ ಕುಷ್ಟಗಿ ಮಾರುತಿ ವೃತ್ತದ ಎಸ್‌ಬಿಐ ಸಿಬ್ಬಂದಿಗೆ ಕೊರೊನಾ ಸೋಂಕು ವಕ್ಕರಿಸಿತ್ತು. ಸದ್ಯ ಹೂಲಗೇರಾ ಗ್ರಾಮದ ಎಸ್‌ಬಿಐ ಸಿಬ್ಬಂದಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇಲಕಲ್ ನಿವಾಸಿಯಾಗಿರುವ ಬ್ಯಾಂಕ್ ಉದ್ಯೋಗಿ, ಹೂಲಗೇರಾ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದರು. ಸದ್ಯ ಅವರಿಗೆ ಕೊರೊನಾ ದೃಢವಾಗಿದ್ದು, ಹೋಮ್ ಐಸೊಲೇಷನ್‌ಗೆ ಇಚ್ಛಿಸಿದ್ದಾರೆ. ಇನ್ನು, ಹೂಲಗೇರಾ ಗ್ರಾ.ಪಂ ಮುನ್ನೆಚ್ಚರಿಕೆ ಕ್ರಮವಾಗಿ ಬ್ಯಾಂಕ್‌ಗೆ ಸೋಂಕು ನಿವಾರಕ ಔಷಧಿ ಸಿಂಪಡಿಸಲಾಗಿದೆ ಎಂದು ಪಿಡಿಒ ವೆಂಕಟೇಶ ವಂದಾಲ ತಿಳಿಸಿದ್ದಾರೆ.
ಕಳೆದ ಶುಕ್ರವಾರ ಕುಷ್ಟಗಿ ಮಾರುತಿ ವೃತ್ತದ ಎಸ್‌ಬಿಐ ಸಿಬ್ಬಂದಿಗೆ ಸೋಂಕು ತಗುಲಿರುವುದು ದೃಢವಾಗಿತ್ತು. ಕೆಲವೇ ದಿನಗಳಲ್ಲಿ ಹೂಲಗೇರಾ ಗ್ರಾಮದ ಎಸ್‌ಬಿಐ ಸಿಬ್ಬಂದಿಗೂ ಕೊರೊನಾ ವಕ್ಕರಿಸಿದ ಹಿನ್ನೆಲೆಯಲ್ಲಿ ಬ್ಯಾಂಕ್‌ನ ಇತರೆ ಸಿಬ್ಬಂದಿ ಹಾಗು ಗ್ರಾಹಕರಲ್ಲಿ ಆತಂಕ ಮನೆ ಮಾಡಿದೆ.