ಕೊಪ್ಪಳ:ಕೊರೊನಾ ಲಾಕ್ಡೌನ್ ಇದೀ ದೇಶದ ಆರ್ಥಿಕತೆಯನ್ನು ಬುಡಮೇಲು ಮಾಡೋ ಸಾಧ್ಯತೆ ಇದೆ. ಎಲ್ಲಾ ಕ್ಷೇತ್ರಗಳ ಮೇಲೆ ಪರಿಣಾಮ ಬೀರಿರುವ ಕೋವಿಡ್-19 ನೇಕಾರ ಉದ್ಯಮವನ್ನೇ ನಂಬಿಕೊಂಡಿರುವ ಕಾರ್ಮಿಕರು ಹಾಗೂ ಸೀರೆ ತಯಾರಕರ ಬದುಕನ್ನು ಬೀದಿಗೆ ದೂಡಿದೆ.
ನಗರದ ಭಾಗ್ಯನಗರ ಪಟ್ಟಣದಲ್ಲಿ ನೇಕಾರ ಉದ್ಯಮ ಹೆಚ್ಚಾಗಿ ನಡೆಯುತ್ತದೆ. ಆದರೆ ಕಳೆದೊಂದು ತಿಂಗಳಿಂದ ಯಾವುದೇ ಕಾರ್ಯ ಚಟುವಟಿಕೆಗಳು ನಡೆಯದೆ ಬಂದ್ ಆಗಿದೆ. ಮಾಲೀಕರು ಸೇರಿದಂತೆ ಕಾರ್ಮಿಕರು ಪರದಾಡುವಂತಾಗಿದೆ. ಇಲ್ಲಿ ತಯಾರಿಸುವ ಸೀರೆಗಳಿಗೆ ರಾಜ್ಯ ಸೇರಿದಂತೆ ನೆರೆಯ ಆಂಧ್ರ, ಮಹಾರಾಷ್ಟ್ರದಲ್ಲಿ ಹೆಚ್ಚಿನ ಬೇಡಿಕೆಯಿದೆ. ಆದರೆ ಲಾಕ್ಡೌನ್ನಿಂದ ಯಾವುದೇ ಸಂಚಾರದ ವ್ಯವಸ್ಥೆಯಿಲ್ಲದೆ ಲಕ್ಷಗಟ್ಟಲೇ ಹಣ ಖರ್ಚು ಮಾಡಿ ತಯಾರು ಮಾಡಿರುವ ಸೀರೆಗಳು ಮಾರಾಟವಾಗದೆ ಹಾಗೆ ಉಳಿದಿವೆ.