ಕೊಪ್ಪಳ:ಪ್ರತಿಯೊಂದು ಕ್ಷೇತ್ರದ ಮೇಲೂ ಕೊರೊನಾ ಕರಿನೆರಳು ಬಿದ್ದಿದ್ದು, ಕೊರೊನಾದಿಂದ ನಗರದಲ್ಲಿರುವ ಹೋಟೆಲ್ಗಳು ಮತ್ತು ಚಿತ್ರಮಂದಿರಗಳು ನಷ್ಟ ಅನುಭವಿಸುತ್ತಿವೆ.
ಕೊರೊನಾ ನಿಯಂತ್ರಣ ಮಾಡಲು ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡಿದೆ. ಇದರ ಪರಿಣಾಮ ಕೂಲಿ ಕಾರ್ಮಿಕರು, ರೈತರು, ಬಡಜನರು ಎಲ್ಲರೂ ಸಂಕಷ್ಟ ಎದುರಿಸುತ್ತಿದ್ದಾರೆ. ಇನ್ನು ಜಿಲ್ಲೆಯಲ್ಲಿರುವ ಚಿತ್ರಮಂದಿರಗಳಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಸ್ಥಿತಿ ಕೂಡ ಇದೇ ಆಗಿದೆ.
ಜಿಲ್ಲೆಯಲ್ಲಿ ಸುಮಾರು 24 ಚಿತ್ರಮಂದಿರಗಳಿದ್ದು, ಪ್ರತಿಯೊಂದರಲ್ಲೂ 8ರಿಂದ 10 ಜನ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಕೊರೊನಾದಿಂದ ಇಡೀ ದೇಶವೇ ಲಾಕ್ಡೌನ್ ಇರುವುದರಿಂದ ಚಿತ್ರಮಂದಿರಗಳು ಬಾಗಿಲು ಹಾಕಿಕೊಂಡಿವೆ. ಪರಿಣಾಮ ಚಿತ್ರಮಂದಿರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕಷ್ಟಕ್ಕೆ ಸಿಲುಕುವಂತಾಗಿದೆ. ಕೇವಲ ಕಾರ್ಮಿಕರು ಅಷ್ಟೇ ಅಲ್ಲದೆ ಚಿತ್ರಮಂದಿರದ ಮಾಲೀಕರಿಗೂ ಕಷ್ಟ ಎದುರಾಗಿದೆ.