ಕರ್ನಾಟಕ

karnataka

ETV Bharat / state

ಕೊರೊನಾ ಆತಂಕ: ಸಾರಿಗೆ ವಾಹನಗಳಲ್ಲಿ ಸ್ವಚ್ಛತಾ ಕಾರ್ಯ - ಗಂಗಾವತಿ ಸಾರಿಗೆ ವಾಹನಗಳ ಸ್ವಚ್ಛತಾ ಕಾರ್ಯ

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿರುವ ಹಿನ್ನೆಲೆ ಸಾರಿಗೆ ಇಲಾಖೆ ಸಹ ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕ ಬಳಕೆಯ ವಾಹನಗಳ ಮೇಲೆ ನಿಗಾ ವಹಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

Cleaning of public Transport Vehicles in gangavthi
ಸಾರಿಗೆ ಬಸ್​ಗಳ ಸ್ವಚ್ಛತಾ ಕಾರ್ಯ ಆರಂಭ

By

Published : Mar 15, 2020, 11:55 PM IST

ಗಂಗಾವತಿ: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ಎದುರಾಗಿರುವ ಹಿನ್ನೆಲೆ ಸಾರಿಗೆ ಇಲಾಖೆ ಸಹ ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕ ಬಳಿಕೆಯ ವಾಹನಗಳ ಮೇಲೆ ನಿಗಾ ವಹಿಸಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾಗಿದೆ.

ಸಾರಿಗೆ ಬಸ್​ಗಳ ಸ್ವಚ್ಛತಾ ಕಾರ್ಯ ಆರಂಭ

ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಸಿಬ್ಬಂದಿಯನ್ನು ಸ್ವಚ್ಛತೆಗಾಗಿ ನಿಯೋಜಿಸಲಾಗಿದ್ದು, ಯಾವುದೇ ಘಟಕದ ವಾಹನ ಬಂದರೂ ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿ ನಾಲ್ಕೈದು ನಿಮಿಷದಲ್ಲಿ ಡೆಟಾಯಿಲ್ ಸ್ಪ್ರೆ ಮಾಡಿ ಶುಚಿಗೊಳಿಸುತ್ತಿದ್ದಾರೆ. ಮುಖ್ಯವಾಗಿ ಚಾಲಕನ ಸ್ಟೇರಿಂಗ್, ಪ್ರಯಾಣಿಕರು ಬಳಸುವ ಹ್ಯಾಂಡಲ್, ಸೀಟಿನ ಹಿಡಿಕೆ, ನಿರ್ವಾಹಕ ಕೂರುವ ಸೀಟ್​ ಹೀಗೆ ಎಲ್ಲಾ ಕಡೆ ಸ್ವಚ್ಛತೆ ಮಾಡಲಾಗುತ್ತಿದೆ. ಜನರಲ್ಲಿ ಉಂಟಾಗಿರುವ ವೈರಸ್ ಆತಂಕ ದೂರ ಮಾಡಲು ಯತ್ನಿಸುತ್ತಿದ್ದಾರೆ.

ABOUT THE AUTHOR

...view details