ಕೊಪ್ಪಳ: ಕೊರೊನಾ ದೃಢಪಟ್ಟ ಯುವಕನೋರ್ವ ಕೋವಿಡ್ ವಾರ್ಡ್ನ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.
ನಗರದ ಜಿಲ್ಲಾಸ್ಪತ್ರೆ ಹಿಂಭಾಗದಲ್ಲಿರುವ ಕೊರೊನಾ ಚಿಕಿತ್ಸಾ ವಾರ್ಡ್ನ ಶೌಚಾಲಯದಲ್ಲಿ ಸೋಂಕಿತ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಜಿಲ್ಲೆಯ ಕುಕನೂರು ತಾಲೂಕಿನ ಚಿಕ್ಕಬೀಡನಾಳ ಗ್ರಾಮದ 26 ವರ್ಷದ ಯುವಕ ಆತಹತ್ಯೆಗೆ ಶರಣಾಗಿದವನು ಎಂದು ತಿಳಿದುಬಂದಿದೆ.
ಕೊರೊನಾ ದೃಢಪಟ್ಟ ವ್ಯಕ್ತಿ ಕೋವಿಡ್ ಆಸ್ಪತ್ರೆಯ ಶೌಚಾಲಯದಲ್ಲಿ ಆತ್ಮಹತ್ಯೆ ಯುವಕನಿಗೆ ಪಾಸಿಟಿವ್ ದೃಢಪಟ್ಟಿತ್ತು. ಈ ಹಿನ್ನೆಲೆ ಆತನನ್ನು ಸೋಮವಾರ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಶೌಚಾಲಯದಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನಿನ್ನೆ ರಾತ್ರಿ ವೈದ್ಯರಿಗೆ ಕರೆ ಮಾಡಿದ್ದಾಗ ಆರಾಮಾಗಿಯೇ ಇದ್ದಾನೆ ಎಂದಿದ್ದರು. ಆದರೆ ಸಂಜೆ ಶೌಚಾಲಯಕ್ಕೆ ತೆರಳಿದಾತ ವಾಪಸ್ ಬಂದಿಲ್ಲ. ಇದನ್ನು ಸಿಬ್ಬಂದಿ ಗಮನಿಸಬೇಕಿತ್ತು. ಆದರೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.