ಕರ್ನಾಟಕ

karnataka

ETV Bharat / state

ಕೊಪ್ಪಳ: 484 ಪಾಸಿಟಿವ್ ಕೇಸ್ ಪತ್ತೆ, ನಾಲ್ವರು ಸೋಂಕಿತರ ಸಾವು - covid 19 cases increased in koppala

ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 2,214 ಸಕ್ರೀಯ ಪ್ರಕರಣಗಳಿದ್ದು, ಆ ಪೈಕಿ 1,997 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 217 ಜನ ಕೋವಿಡ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

corona-cases-increased-in-koppala
ಕೊಪ್ಪಳ

By

Published : Apr 28, 2021, 9:42 PM IST

ಕೊಪ್ಪಳ: ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿದೆ. ಇಂದು ಒಂದೇ ದಿನ ಬರೋಬ್ಬರಿ 484 ಪಾಸಿಟಿವ್ ಕೇಸ್‍ಗಳು ಪತ್ತೆಯಾಗಿದ್ದು, ನಾಲ್ವರು ಸೋಂಕಿತರು ಮೃತಪಟ್ಟಿದ್ದಾರೆ.

ಕೊಪ್ಪಳ ಜಿಲ್ಲೆಯ ಕೋವಿಡ್​ ಅಂಕಿ ಅಂಶ

ತಾಲೂಕಿನಲ್ಲಿ 144, ಗಂಗಾವತಿಯಲ್ಲಿ 221, ಕುಷ್ಟಗಿ ತಾಲೂಕಿನಲ್ಲಿ 84 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 35 ಪ್ರಕರಣ ಸೇರಿ ಜಿಲ್ಲೆಯಲ್ಲಿ ಇಂದು ಒಟ್ಟು 484 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ 17,295ಗೆ ತಲುಪಿದೆ.

ಇಂದು ಜಿಲ್ಲೆಯಲ್ಲಿ ನಾಲ್ವರು ಸೋಂಕಿತರು ಮೃತಪಟ್ಟಿದ್ದು, ಈವರೆಗೆ ಒಟ್ಟು 294 ಜನ ನಿಧನರಾಗಿದ್ದಾರೆ. ಇಂದು 130 ಜನರು ಗುಣಮುಖರಾಗಿದ್ದು, ಈವರೆಗೆ ಒಟ್ಟು 14,784 ಜನರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 2,214 ಸಕ್ರೀಯ ಪ್ರಕರಣಗಳಿದ್ದು, ಆ ಪೈಕಿ 1997 ಸೋಂಕಿತರು ಹೋಂ ಐಸೋಲೇಷನ್‍ನಲ್ಲಿದ್ದಾರೆ. ಉಳಿದಂತೆ 217 ಜನ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದಿ:ಆಕ್ಸಿಜನ್, ಬೆಡ್ ಬಗ್ಗೆ ಎಚ್ಚರ ವಹಿಸದಿದ್ರೆ ಕರ್ನಾಟಕ 2ನೇ ದಿಲ್ಲಿ ಆಗುತ್ತೆ ಹುಷಾರ್: ಹೆಚ್ ಕೆ ಪಾಟೀಲ್

ABOUT THE AUTHOR

...view details