ಕರ್ನಾಟಕ

karnataka

ETV Bharat / state

ಕೊಪ್ಪಳದಲ್ಲಿ ಮತ್ತೆ 10 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 149ಕ್ಕೆ ಏರಿಕೆ - ಕೊರೊನಾ

ಕೊಪ್ಪಳ ಜಿಲ್ಲೆಯಲ್ಲಿ ಮತ್ತೆ 10 ಮಂದಿಗೆ ಕೊರೊನಾ ಸೋಂಕು ತಗುಲಿದ್ದು, ಜನರಲ್ಲಿ ಆತಂಕ ಹೆಚ್ಚಾಗುವಂತೆ ಮಾಡಿದೆ.

dsds
ಕೊಪ್ಪಳದಲ್ಲಿ ಮತ್ತೆ 10 ಮಂದಿಗೆ ಕೊರೊನಾ

By

Published : Jul 7, 2020, 6:14 PM IST

ಕೊಪ್ಪಳ: ಜಿಲ್ಲೆಯಲ್ಲಿ ಇಂದು ಮತ್ತೆ 10 ಕೊರೊನಾ ಪಾಸಿಟಿವ್ ಕೇಸ್​ಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 149 ಕ್ಕೆ ಏರಿಕೆಯಾಗಿದೆ.

ಕೊಪ್ಪಳದಲ್ಲಿ ಮತ್ತೆ 10 ಮಂದಿಗೆ ಕೊರೊನಾ

ಗಂಗಾವತಿ ತಾಲೂಕಿನಲ್ಲಿ 4, ಕೊಪ್ಪಳ ತಾಲೂಕಿನಲ್ಲಿ 3 ಹಾಗೂ ಕುಷ್ಟಗಿ ತಾಲೂಕಿನಲ್ಲಿ 3 ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡ ಗ್ರಾಮದ 24 ವರ್ಷದ ಮಹಿಳೆ, 36 ವರ್ಷದ ಮಹಿಳೆ ಹಾಗೂ ಬಲಕುಂದದ 40 ವರ್ಷದ ಪುರುಷ , ಕೊಪ್ಪಳ ನಗರದ 44, 45 ವರ್ಷದ ಇಬ್ಬರು ಪುರುಷರು, ಬೆಂಗಳೂರಿನಿಂದ ಬಂದಿರುವ ಟ್ರಾವೆಲ್ ಹಿಸ್ಟರಿಯ ಕೊಪ್ಪಳ ತಾಲೂಕಿನ ಲಾಚನಕೇರಿ ಗ್ರಾಮದ 22 ವರ್ಷದ ಯುವಕ, ಗಂಗಾವತಿ ತಾಲೂಕಿನ ಬೂದಗುಂಪಾ ಗ್ರಾಮದ 37 ವರ್ಷದ ಪುರುಷ, ಗುಂಡಮ್ಮ ಕ್ಯಾಂಪ್​ನ 65 ವರ್ಷದ ವೃದ್ಧನಿಗೆ ಸೋಂಕು ತಗುಲಿದೆ.

ಗಂಗಾವತಿ ನಗರದ 35, ಮುರಾರಿ ಕ್ಯಾಂಪ್​ನ 37 ವರ್ಷದ ಇಬ್ಬರು ಪುರುಷರಿಗೆ ಕೊರೊನಾ ವಕ್ಕರಿಸಿದೆ. ಸೋಂಕಿತರನ್ನು ಈಗಾಗಲೇ‌ ನಿಗದಿತ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತರ ಪ್ರಾಥಮಿಕ, ದ್ವಿತೀಯ ಸಂಪರ್ಕಿತರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ.

ABOUT THE AUTHOR

...view details