ಕರ್ನಾಟಕ

karnataka

ETV Bharat / state

ಕೊರೊನಾದಿಂದಾಗಿ ಎತ್ತುಗಳ ರೇಟ್‌ ಕಡಿಮೆ ಆಯ್ತು ನೋಡ್ರೀ.. ಎಲ್ಲಾ ಲುಕ್ಸಾನು!!

ಉತ್ತಮ ಮಳೆಯಾಗಿದ್ದರೂ ಎತ್ತುಗಳ ಮೂಲಕ ವ್ಯವಸಾಯ ಮಾಡುವವರು ವಿರಳವಾಗಿದ್ದಾರೆ. ಯಂತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ..

ಜಾನುವಾರು ಸಂತೆ
ಜಾನುವಾರು ಸಂತೆ

By

Published : Sep 28, 2020, 8:23 PM IST

ಕುಷ್ಟಗಿ (ಕೊಪ್ಪಳ) :ಪಟ್ಟಣದ ವಾರದ ಜಾನುವಾರು ಸಂತೆ ಕೊರೊನಾದಿಂದಾಗಿ ಅತಂತ್ರ ಸ್ಥಿತಿಯಲ್ಲಿದೆ. ಈ ನಡುವೆಯೂ ನಡೆದ ಸಂತೆಯಲ್ಲಿ ಉಳುಮೆಗೆ ಯೋಗ್ಯ ಎತ್ತುಗಳಿದ್ದರೂ ಸರಿಯಾದ ಬೆಲೆ ಸಿಗದೆ ರೈತರು ಕಂಗಾಲಾಗಿದ್ದಾರೆ.

ಮುಂಗಾರು ಹಂಗಾಮಿನಲ್ಲಿ ಎತ್ತುಗಳು ದುಬಾರಿಯಾಗಿದ್ದರೂ ಸಹ ಖರೀದಿಸಲಾಗಿತ್ತು. ಆದರೀಗ 80 ಸಾವಿರ ರೂ. ಬೆಲೆಯ ಜೋಡೆತ್ತುಗಳನ್ನು 40 ರಿಂದ 50 ಸಾವಿರ ರೂ. ಬೆಲೆಗೆ ಗ್ರಾಹಕರು ಕೇಳುತ್ತಿದ್ದಾರೆ. ಕಡಿಮೆ ಬೆಲೆಗೆ ಎತ್ತು ಮಾರಿದ್ರೆ ನಷ್ಟಕ್ಕೀಡಾಗುತ್ತೇವೆ ಎಂದು ರೈತರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜಾನುವಾರು ಸಂತೆ

ಈ ಕುರಿತು ರೈತನೋರ್ವ ಮಾತನಾಡಿ, ಲಾಕಡೌನ್ ಅರಿವಿಲ್ಲದೇ ದುಬಾರಿ ಬೆಲೆಗೆ ಎತ್ತುಗಳನ್ನು ಖರೀದಿಸಲಾಗಿತ್ತು. ಇದೀಗ ಅವೇ ಎತ್ತುಗಳನ್ನ ಕನಿಷ್ಟ ಬೆಲೆಗೆ ಕೇಳುತ್ತಿದ್ದಾರೆ. ಉತ್ತಮ ಮಳೆಯಾಗಿದ್ದರೂ ಎತ್ತುಗಳ ಮೂಲಕ ವ್ಯವಸಾಯ ಮಾಡುವವರು ವಿರಳವಾಗಿದ್ದಾರೆ. ಯಂತ್ರಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಇದರಿಂದ ಉಳುಮೆಗೆ ಯೋಗ್ಯ ಜೋಡೆತ್ತುಗಳ ಧಾರಣೆ ಕುಸಿತಕ್ಕೆ ಕಾರಣವಾಗಿದೆ ಎಂದರು.

ABOUT THE AUTHOR

...view details