ಗಂಗಾವತಿ :ಪ್ರತಿ ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ಯುವಕನೊಬ್ಬ ಈ ಬಾರಿ ಕೊರೊನಾದಿಂದಾಗಿ ತನ್ನ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಆಚರಿಸಿಕೊಂಡಿರುವುದಲ್ಲದೇ ಉಚಿತ ಹೋಮಿಯೋಪತಿ ಔಷಧಿ ವಿತರಿಸಿ ಕೊರೊನಾ ಜಾಗೃತಿ ಮೂಡಿಸಿರುವುದು ತಾಲೂಕಿನ ಮುಸ್ಟೂರು ಕ್ಯಾಂಪಿನಲ್ಲಿ ನಡೆದಿದೆ.
ಹುಟ್ಟುಹಬ್ಬದ ಅಂಗವಾಗಿ ಕೊರೊನಾ ಜಾಗೃತಿ.. ಉಚಿತ ಹೋಮಿಯೋಪತಿ ಔಷಧಿ ವಿತರಿಸಿದ ಯುವಕ.. - Free Homeopathic medicine Distribute
ಯುವಕ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸತೀಶ್, ಪ್ರತಿ ವರ್ಷ ಹುಟ್ಟುಹಬ್ಬವನ್ನು ಸ್ನೇಹಿತರು, ಅಭಿಮಾನಿಗಳು, ಬೆಂಬಲಿಗರ ಮಧ್ಯೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದ. ಆದರೆ, ಲಾಕ್ಡೌನ್ನಿಂದಾಗಿ ಕಣ್ಣಾರೆ ಕಂಡ ದೃಶ್ಯದಿಂದ ಪ್ರೇರಿತನಾಗಿ ಸರಳ ಹುಟ್ಟುಹಬ್ಬಕ್ಕೆ ಮುಂದಾಗಿದ್ದಾರೆ..
ಯುವಕ ಹಾಗೂ ಕಾಂಗ್ರೆಸ್ ಪಕ್ಷದ ಯುವ ಮುಖಂಡ ಸತೀಶ್, ಪ್ರತಿ ವರ್ಷ ಹುಟ್ಟುಹಬ್ಬವನ್ನು ಸ್ನೇಹಿತರು, ಅಭಿಮಾನಿಗಳು, ಬೆಂಬಲಿಗರ ಮಧ್ಯೆ ಅದ್ದೂರಿಯಾಗಿ ಆಚರಿಸಿಕೊಳ್ಳುತ್ತಿದ್ದ. ಆದರೆ, ಲಾಕ್ಡೌನ್ನಿಂದಾಗಿ ಕಣ್ಣಾರೆ ಕಂಡ ದೃಶ್ಯದಿಂದ ಪ್ರೇರಿತನಾಗಿ ಸರಳ ಹುಟ್ಟುಹಬ್ಬಕ್ಕೆ ಮುಂದಾಗಿದ್ದಾರೆ.
ಈ ಯುವಕ ಪ್ರತಿ ವರ್ಷ ಹುಟ್ಟುಹಬ್ಬಕ್ಕೆ ವ್ಯಯಿಸುತ್ತಿದ್ದ ಹಣವನ್ನು ಈ ಬಾರಿ ಕೊರೊನಾ ಜಾಗೃತಿಗೆ ಮೀಸಲಿಟ್ಟಿದ್ದಾರೆ. ಗ್ರಾಮದ ಸುಮಾರು 200 ಜನರಿಗೆ ರೋಗ ನಿರೋಧ ಶಕ್ತಿ ಹೆಚ್ಚಿಸಿ ಕೊರೊನಾ ಸೋಂಕು ತಡೆಯಲು ನೆರವಾಗಬಲ್ಲ ಹೋಮಿಯೋಪತಿ ಔಷಧಿಯನ್ನು ಯುವಕ ಉಚಿತವಾಗಿ ವಿತರಿಸಿ ಗಮನ ಸೆಳೆದಿದ್ದಾರೆ.