ಕೊಪ್ಪಳ: ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ ಎಂಬ ಸುಳ್ಳು ಸುದ್ದಿಯನ್ನು ಕೊಪ್ಪಳ ಜಿಲ್ಲಾಧಿಕಾರಿಗೆ ರವಾನಿಸಿದ ಹಿನ್ನೆಲೆ ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದ ಯುವಕನೊಬ್ಬನ ಮೇಲೆ ಎಫ್ಐಆರ್ ದಾಖಲಾಗಿದೆ.
ಕೊರೊನಾ: ಸುಳ್ಳು ಸುದ್ದಿ ಹಿನ್ನೆಲೆ ಯುವಕನ ವಿರುದ್ಧ ಎಫ್ಐಆರ್
ಕೊರೊನಾ ವೈರಸ್ ಕುರಿತು ಸುಳ್ಳು ಸುದ್ದಿ ಹಬ್ಬಿಸಿದ ಹಿನ್ನೆಲೆ ವ್ಯಕ್ತಿಯೊಬ್ಬನ ಮೇಲೆ ಎಫ್ಐಆರ್ ದಾಖಲಾಗಿದೆ. ಇಲ್ಲಿನ ಗಂಗಾವತಿ ಬಳಿಯ ಗ್ರಾಮದ ಯುವಕ ಪ್ರಭುರಾಜ್ ಹುಳ್ಳಿ ಎಂಬುವವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ತಲೆಮರೆಸಿಕೊಂಡಿದ್ದಾನೆ. ಹಜ್ ಯಾತ್ರೆ ಮುಗಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಮಸೀದಿಯಲ್ಲಿ ತಂಗಿದ್ದಾರೆ ಎಂದು ಜಿಲ್ಲಾಧಿಕಾರಿಯ ಮೊಬೈಲ್ಗೆ ಸಂದೇಶ ರವಾನಿಸಿದ್ದ.
ಇಲ್ಲಿನ ಗಂಗಾವತಿ ಬಳಿಯ ಗ್ರಾಮದ ಯುವಕ ಪ್ರಭುರಾಜ್ ಹುಳ್ಳಿ ಎಂಬುವವರ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯು ತಲೆಮರೆಸಿಕೊಂಡಿದ್ದಾನೆ. ಹಜ್ ಯಾತ್ರೆ ಮುಗಿಸಿಕೊಂಡು ಬಂದಿರುವ ವ್ಯಕ್ತಿಯೊಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು ಮಸೀದಿಯಲ್ಲಿ ತಂಗಿದ್ದಾರೆ.
ಇದರಿಂದ ಸಾಂಕ್ರಾಮಿಕವಾಗಿ ರೋಗ ಹರಡುವ ಭೀತಿ ಎದುರಾಗಿದೆ ಎಂದು ಯುವಕ ಜಿಲ್ಲಾಧಿಕಾರಿಯ ಮೊಬೈಲ್ಗೆ ಸಂದೇಶ ರವಾನಿಸಿದ್ದ. ಈ ಬಗ್ಗೆ ತನಿಖೆ ನಡೆಸಿದಾಗ ಮಾಹಿತಿ ಸುಳ್ಳು ಎಂದು ಗೊತ್ತಾಗಿದೆ. ಈ ಹಿನ್ನೆಲೆ ಮರಳಿ ಕಂದಾಯ ನಿರೀಕ್ಷಕ ಹನುಮಂತಪ್ಪ ಗ್ರಾಮೀಣ ಠಾಣೆ ದೂರು ದಾಖಲಿಸಿದ್ದಾರೆ.