ಗಂಗಾವತಿ:ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇಡೀ ಸೃಷ್ಟಿಯನ್ನು ನಿಯಂತ್ರಿಸುವುದು, ಮುನ್ನೆಡೆಸಿಕೊಂಡು ಹೋಗುತ್ತಿರುವುದು ಮಾತ್ರ ದೈವ ಶಕ್ತಿ
ಎಂದು ಅಂತಾರಾಷ್ಟ್ರೀಯಮಟ್ಟದ ಧರ್ಮ ಪ್ರಚಾರಕ ಹಾಗೂ ಭಾಷಣಕಾರ ಜಾನ್ ವೆಸ್ಲಿ ಹೇಳಿದ್ರು.
ಇಡೀ ಸೃಷ್ಟಿಯನ್ನು ನಿಯಂತ್ರಿಸುತ್ತಿರುವುದು ದೈವ ಶಕ್ತಿ: ಜಾನ್ ವೆಸ್ಲಿ - John Wesley, International Religious Propagator and Speaker
ಜಗತ್ತು ವೈಜ್ಞಾನಿಕವಾಗಿ ಎಷ್ಟೇ ಮುಂದುವರೆದರೂ ಇಡೀ ಸೃಷ್ಟಿಯನ್ನು ನಿಯಂತ್ರಿಸುವುದು, ಮುನ್ನೆಡೆಸಿಕೊಂಡು ಹೋಗುತ್ತಿರುವುದು ಮಾತ್ರ ದೈವ ಶಕ್ತಿ ಎಂದು ಅಂತಾರಾಷ್ಟ್ರೀಯಮಟ್ಟದ ಧರ್ಮ ಪ್ರಚಾರಕ ಹಾಗೂ ಭಾಷಣಕಾರ ಜಾನ್ ವೆಸ್ಲಿ ಹೇಳಿದ್ರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕ್ರೈಸ್ತ ಸಮುದಾಯದ ವಿವಿಧ ಸಂಘಟನೆಗಳ ಹಿರಿಯ ಮುಖಂಡ ಪಿ.ವಿಜಯಕುಮಾರ್ ನೇತೃತ್ವದಲ್ಲಿ ಹಮ್ಮಿಕೊಂಡಿರುವ ರಾಜ್ಯಮಟ್ಟದ ಕ್ರೈಸ್ತ ಶಾಂತಿ ಮಹೋತ್ಸವದಲ್ಲಿ ಮಾತನಾಡಿದ ಅವರು, ಮನಷ್ಯ ಎಷ್ಟೇ ಸಂಪಾದನೆ ಮಾಡಿದರು, ಅಷ್ಟೈಶ್ವರ್ಯ ಇದ್ದರೂ ಅವನಿಗೆ ನೆಮ್ಮದಿ ಮಾತ್ರ ಕೊಳ್ಳಲು ಸಾಧ್ಯವಿಲ್ಲ. ನೆಮ್ಮದಿ ಕೇವಲ ಧರ್ಮ ಆಚರಣೆಯಿಂದ ಮಾತ್ರ ಸಾಧ್ಯ ಎಂದರು.
ಎರಡು ಸಾವಿರ ವರ್ಷಗಳ ಹಿಂದೆ ಜನಿಸಿದ್ದ ಏಸು ವಿಶ್ವದೆಲ್ಲೆಡೆ ಶಾಂತಿ ಸ್ಥಾಪನೆಗೆ ಶ್ರಮಿಸಿ ತಮ್ಮ ಜೀವನ ಮುಡಿಪಾಗಿಟ್ಟರು. ಆದರೆ ಇಂದಿಗೂ ಶಾಂತಿ ನೆಲೆಸಿಲ್ಲ. ಏಸುವಿನ ಮೊರೆ ಹೋಗುವ ಮೂಲಕ ಮತ್ತು ಆತನ ಆರ್ದಶಗಳನ್ನು ಪಾಲಿಸುವ ಮೂಲಕ ಎಲ್ಲರೂ ಶಾಂತಿ ನೆಲೆಸಲು ಯತ್ನಿಸಬಹುದು ಎಂದರು.