ಕರ್ನಾಟಕ

karnataka

ETV Bharat / state

ಗಂಗಾವತಿಯಲ್ಲಿ ಮತ್ತೆ ಮುಂದುವರೆದ ಅಕ್ರಮ ಮರಳು ಸಾಗಾಟ - ಗಣಿ ಮತ್ತು ಭೂ ವಿಜ್ಞಾನ ಇಲಾಖೆ

ಗಂಗಾವತಿ ತಹಶೀಲ್ದಾರ್ ಕಚೇರಿಗೆ ಕೇವಲ ಎರಡು ಕಿ.ಮೀ ಅಂತರದ ತುಂಗಭದ್ರಾ ನದಿ ಪಾತ್ರದಲ್ಲಿರುವ ಹಿರೇಜಂತಕಲ್ ಪ್ರದೇಶದಿಂದ ದೊಡ್ಡಮಟ್ಟದಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ದಾಳಿ ನಡೆಸುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

ಅಕ್ರಮ ಮರಳು ಸಾಗಾಣಿಕೆ
ಅಕ್ರಮ ಮರಳು ಸಾಗಾಣಿಕೆ

By

Published : Oct 8, 2020, 2:09 PM IST

ಗಂಗಾವತಿ: ಕಳೆದ ಹಲವು ದಿನಗಳಿಂದ ತಾಲೂಕಿನಲ್ಲಿ ಸ್ಥಗಿತವಾಗಿದ್ದ ಅಕ್ರಮ ಮರಳು ಸಾಗಾಣಿಕೆ ಇದೀಗ ಮತ್ತೆ ಆರಂಭವಾಗಿದೆ ಎನ್ನಲಾಗಿದೆ.

ತಾಲೂಕಿನಲ್ಲಿ ಮರಳು ಸಂಗ್ರಹಿಸಿ, ಸಾಗಿಸಲು ಅಧಿಕೃತ ನಿಕ್ಷೇಪಗಳಿಗೆ ಇದುವರೆಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಅನುಮತಿ ಸಿಕ್ಕಿಲ್ಲ. ಆದರೆ ಕಳೆದ ಒಂದು ವರ್ಷದಿಂದ ಅಧಿಕೃತವಾಗಿ ಮರಳು ನಿಕ್ಷೇಪಗಳ ಹರಾಜು ಪ್ರಕ್ರಿಯೆ ನಡೆಸಲು ಜಿಲ್ಲಾಡಳಿತ ಯಾವುದೇ ತ್ವರಿತ ಕ್ರಮ ಕೈಗೊಳ್ಳದಿದ್ದರಿಂದ ಅಕ್ರಮ ಮರಳು ಸಾಗಾಣಿಕೆ ದಂಧೆ ನಡೆಯಲು ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ತಹಶೀಲ್ದಾರ್ ಕಚೇರಿಗೆ ಕೇವಲ ಎರಡು ಕಿ.ಮೀ ಅಂತರದಲ್ಲಿರುವ ತುಂಗಭದ್ರಾ ನದಿ ಪಾತ್ರದ ಹಿರೇಜಂತಕಲ್ ಪ್ರದೇಶದಿಂದ ದೊಡ್ಡಮಟ್ಟದಲ್ಲಿ ಅಕ್ರಮವಾಗಿ ಮರಳು ಸಾಗಾಟ ನಡೆಯುತ್ತಿದೆ. ಜೊತೆಗೆ ಮರಳಿ ಹೋಬಳಿಯ ಹೆಬ್ಬಾಳ ಗ್ರಾಮದಿಂದಲೂ ದೊಡ್ಡ ಪ್ರಮಾಣದಲ್ಲಿ ಮರಳು ಸಂಗ್ರಹಿಸಿ ಸಾಗಿಸಲಾಗುತ್ತಿದೆ ಎನ್ನಲಾಗಿದೆ.

ಆದರೆ ಪೊಲೀಸ್, ಕಂದಾಯ, ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಅಕ್ರಮ ಮರಳು ಸಾಗಾಣಿಕೆ ವಾಹನಗಳ ಮೇಲೆ ದಾಳಿಗೆ ಮುಂದಾಗುತ್ತಿಲ್ಲ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.

ABOUT THE AUTHOR

...view details