ಕರ್ನಾಟಕ

karnataka

ETV Bharat / state

ಮಸಣದಲ್ಲಿ ಬಯಲು ರಂಗಮಂದಿರ ನಿರ್ಮಾಣ: ಅಧಿಕಾರಿಗಳ ವಿರುದ್ಧ ಕಲಾವಿದರ ಆಕ್ರೋಶ

ಸಹಜವಾಗಿ ರಂಗ ಮಂದಿರಗಳನ್ನು ಜನ ವಸತಿ ಸಮೀಪದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆದರೆ ಗಂಗಾವತಿ ನಗರಸಭೆ ಅಧಿಕಾರಿಗಳು ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ ಮಾಡಿದ್ದಾರೆ.

ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ
ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ

By

Published : Apr 2, 2021, 5:33 PM IST

ಗಂಗಾವತಿ: ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ ಮಾಡುವ ಮೂಲಕ ನಗರಸಭೆ ಸರ್ಕಾರದ ಲಕ್ಷಾಂತರ ರೂ. ಮೊತ್ತವನ್ನು ವ್ಯರ್ಥ ಮಾಡಿದೆ ಎನ್ನುವ ಆರೋಪ ಕೇಳಿ ಬಂದಿದೆ.

ರುದ್ರಭೂಮಿಯಲ್ಲಿ ರಂಗ ಮಂದಿರ ನಿರ್ಮಾಣ

ನಶಿಸುತ್ತಿರುವ ಕಲೆಗಳನ್ನು ಉಳಿಸಲು ಹಾಗೂ ಕಲಾವಿದರು ಒಂದು ಕಡೆ ಸೇರಿ ರಂಗ ಚಟುವಟಿಕೆಗಳನ್ನು ಕೈಗೊಳ್ಳಲು ಅನುಕೂಲವಾಗಲಿ ಎಂಬ ಕಾರಣಕ್ಕೆ ಸಹಜವಾಗಿ ರಂಗ ಮಂದಿರಗಳನ್ನು ಜನ ವಸತಿ ಸಮೀಪದ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಆದರೆ ನಗರಸಭೆ, 2018-19ನೇ ಸಾಲಿನ 14ನೇ ಹಣಕಾಸು ಯೋಜನೆಯಡಿ ನಿರ್ಜನ ಪ್ರದೇಶದಲ್ಲಿ ಬಯಲು ರಂಗ ಮಂದಿರ ನಿರ್ಮಾಣ ಮಾಡುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ನಗರದ ಹೊರ ಭಾಗದಲ್ಲಿ ರಂಗ ಮಂದಿರ ನಿರ್ಮಾಣ ಮಾಡಲಾಗಿದ್ದು, ಇಂತಹದೊಂದು ಕಟ್ಟಡ ಕಟ್ಟುತ್ತಿರುವ ಬಗ್ಗೆ ನಗರದ ಯಾವೊಬ್ಬ ಕಲಾವಿದರ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.

ಇನ್ನು ಅಧಿಕಾರಿಗಳೇ ವಿವೇಚನೆಯಿಲ್ಲದೆ ಹೀಗೆ ಸರ್ಕಾರದ ಹಣವನ್ನು ಪೋಲು ಮಾಡುತ್ತಿರುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸಿ ತಪ್ಪಿತಸ್ತರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಮನವಿ.

ABOUT THE AUTHOR

...view details