ಕರ್ನಾಟಕ

karnataka

ETV Bharat / state

ಗಂಗಾವತಿ : ಅಂತರ್ಜಲ ಹೆಚ್ಚಳಕ್ಕೆ ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ..

By

Published : Jun 1, 2021, 6:59 PM IST

construction-of-forest-potholes-in-forest-to-increase-groundwater-at-gangavathi
ಅಂತರ್ಜಲ ಹೆಚ್ಚಳಕ್ಕೆ ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

ಗಂಗಾವತಿ :ಮಳೆಗಾಲದಲ್ಲಿ ಬೀಳುವ ಮಳೆಯ ನೀರು ವ್ಯರ್ಥವಾಗಿ ಹರಿದು ಹೋಗದಂತೆ ತಡೆದು, ಅಂತರ್ಜಲ ಹೆಚ್ಚಿಸುವ ಉದ್ದೇಶಕ್ಕೆ ಕನಕಗಿರಿ ತಾಲೂಕಿನ ನಾಗಲಾಪುರ ಗ್ರಾಮದ ಅರಣ್ಯದಲ್ಲಿ 300ಕ್ಕೂ ಹೆಚ್ಚು ಇಂಗುಗುಂಡಿಗಳನ್ನು (ಟ್ರೆಂಚ್) ನಿರ್ಮಾಣ ಮಾಡಲಾಗಿದೆ.

ಅರಣ್ಯದಲ್ಲಿ ಇಂಗು ಗುಂಡಿ ನಿರ್ಮಾಣ

80 ಜನ ಕೂಲಿಕಾರರು ಸೇರಿ ಒಂದು ವಾರದ ಅಂತರದಲ್ಲಿ ಈ ಇಂಗುಗುಂಡಿ ನಿರ್ಮಾಣ ಕಾರ್ಯ ಮಾಡಿದ್ದಾರೆ. ಮಾನ್ಸೂನ್ ಆರಂಭವಾಗುವ ಸಂದರ್ಭದಲ್ಲಿ ಈ ಇಂಗುಗುಂಡಿಗಳು ಹೆಚ್ಚು ಪ್ರಯೋಜನಕಾರಿಯಾಗಲಿದ್ದು, ಅರಣ್ಯ ಪ್ರದೇಶದಲ್ಲಿನ ಮರಗಿಡಗಳಿಗೆ ನೀರೊದಗಿಸಲಿವೆ.

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

ಇಂಗು ಗುಂಡಿ ನಿರ್ಮಾಣ ಮಾಡುತ್ತಿರುವ ಕೂಲಿಕಾರರು

ಸಾಮಾಜಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ 15 ಅಡಿ ಉದ್ದ, ತಲಾ ಮೂರು ಅಡಿ ಅಗಲ ಹಾಗೂ ಆಳದಲ್ಲಿ ಈ ಇಂಗುಗುಂಡಿಗಳನ್ನು ನಿರ್ಮಾಣ ಮಾಡಲಾಗಿದೆ. ಕಳೆದ ವರ್ಷ ಇದೇ ಕಾಮಗಾರಿಯನ್ನು ಕಾಟಾಪುರ ಹಾಗೂ ಬಂಕಾಪುರ ಗ್ರಾಮದ ಅರಣ್ಯದಲ್ಲಿ ಮಾಡಲಾಗಿದ್ದು, ಸಸ್ಯ ಸಂಪತ್ತು ಹಸಿರಿನಿಂದ ನಳ ನಳಿಸುತ್ತಿದೆ.

ಓದಿ:ಕೊರೊನಾ ನಿಯಂತ್ರಣಕ್ಕೆ ಜೂನ್ ಅಂತ್ಯದವರೆಗೆ ಕಠಿಣ ನಿರ್ಬಂಧ ಅನಿವಾರ್ಯ: ತಾಂತ್ರಿಕ ಸಲಹಾ ಸಮಿತಿ ಸಲಹೆ ಏನಿರಬಹುದು??

ABOUT THE AUTHOR

...view details