ಕೊಪ್ಪಳ:ಜಿಲ್ಲೆಯ ಗಂಗಾವತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯರು, ಕೊರೊನಾ ವೈರಾಣುವನ್ನ ಪ್ರಾಥಮಿಕ ಹಂತದಲ್ಲಿ ತಡೆಗಟ್ಟುವ ಉದ್ದೇಶದಿಂದ ಸೋಂಕು ನಿವಾರಕ ಸುರಂಗ ನಿರ್ಮಿಸಿದ್ದು, ಶಾಸಕ ಪರಣ್ಣ ಮುನವಳ್ಳಿ ಇದಕ್ಕೆ ಚಾಲನೆ ನೀಡಿದ್ರು.
ಗಂಗಾವತಿಯಲ್ಲಿ ಕೊರೊನಾ ಸೋಂಕು ನಿವಾರಕ ಸುರಂಗ ಮಾರ್ಗ ನಿರ್ಮಾಣ
ಗಂಗಾವತಿ ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವೈದ್ಯರು, ಕೊರೊನಾ ವೈರಾಣುವನ್ನ ಪ್ರಾಥಮಿಕ ಹಂತದಲ್ಲಿ ತಡೆಗಟ್ಟುವ ಉದ್ದೇಶದಿಂದ ಸೋಂಕು ನಿವಾರಕ ಸುರಂಗ ನಿರ್ಮಿಸಿದ್ದಾರೆ.
ಗಂಗಾವತಿಯಲ್ಲಿ ಕೊರೊನಾ ಸೋಂಕು ನಿರೋಧಕ ಸುರಂಗ ಮಾರ್ಗ ನಿರ್ಮಾಣ
ಚಿಕಿತ್ಸೆಗೆಂದು ಆಸ್ಪತ್ರೆಗೆ ಬರುವ ಪ್ರತಿಯೊಬ್ಬರು ಈ ಕೊಳವೆ ಮಾರ್ಗದ ಮೂಲಕ ಹಾಯ್ದು ಬರಬೇಕು. ಸುರಂಗ ಮಾರ್ಗ ಮಧ್ಯೆ ವ್ಯಕ್ತಿ ಹಾದು ಹೋಗುವಾಗ ಅಂಟಿಸೆಪ್ಟಿಕ್ ದ್ರಾವಣ ವ್ಯಕ್ತಿಯ ಮೇಲೆ ಸಿಂಪಡಣೆಯಾಗಲಿದೆ. ಹೀಗಾಗಿ ಯಾವುದೇ ಕೀಟಾಣುಗಳು ಅಥವಾ ರೋಗಕಾರಕ ವೈರಾಣುಗಳಿದ್ದರೂ ನಾಶವಾಗುತ್ತವೆ.
ಸುರಂಗದ ಮೂಲಕ ಬರುವ ವ್ಯಕ್ತಿ ಶೇಕಡಾ 90ರಷ್ಟು ವೈರಸ್ ಮುಕ್ತನಾಗಿರುತ್ತಾನೆ ಎಂದು ವೈದ್ಯರು ಹೇಳುತ್ತಾರೆ.