ಕರ್ನಾಟಕ

karnataka

ETV Bharat / state

ಗಂಗಾವತಿ: ಮೊರಾರ್ಜಿ ವಸತಿ ಶಾಲೆಯಲ್ಲಿ 300 ಹಾಸಿಗೆಗಳ ಕೋವಿಡ್​ ಕೇರ್​ ಸೆಂಟರ್​​ ನಿರ್ಮಾಣ - ಮೊರಾರ್ಜಿ ವಸತಿ ಶಾಲೆಯಲ್ಲಿ ಕೋವಿಡ್​ ಕೇರ್​ ಸೆಂಟರ್​​ ನಿರ್ಮಾಣ

ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 300 ಬೆಡ್​ಗಳ ಕೋವಿಡ್​ ಕೇರ್​ ಸೆಂಟರ್​​ ನಿರ್ಮಾಣ ಮಾಡಲಾಗಿದೆ. ಗಂಗಾವತಿ, ಕಾರಟಗಿ ಹಾಗೂ ಕನಕಗಿರಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್​ಗಳು ಭರ್ತಿಯಾದ ಬಳಿಕ ಈ ಕೇಂದ್ರವನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

Gangavathi
ಮೊರಾರ್ಜಿ ವಸತಿ ಶಾಲೆಯಲ್ಲಿ 300 ಹಾಸಿಗೆಗಳ ಕೋವಿಡ್​ ಕೇರ್​ ಸೆಂಟರ್​​ ನಿರ್ಮಾಣ

By

Published : May 7, 2021, 9:24 AM IST

ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಪಾಸಿಟಿವ್ ಕೇಸ್​ಗಳ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ 300 ಬೆಡ್​ಗಳ ಕೋವಿಡ್​ ಕೇರ್​ ಸೆಂಟರ್ ತೆರೆಯಲು ಮುಂದಾಗಿದೆ.

ಗಂಗಾವತಿ ತಾಲೂಕಿನ ಹೇಮಗುಡ್ಡ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 300 ಬೆಡ್​ಗಳ ಕೋವಿಡ್​ ಕೇರ್​ ಸೆಂಟರ್​​ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಅಲ್ಲದೆ, ಸಿದ್ದಾಪುರ ಬಳಿಯಿರುವ ಜಮಾಪುರದ ಹಾಗೂ ಕನಕಗಿರಿಯ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳನ್ನು ತಲಾ 100 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಮಾಡುವ ಸಿದ್ಧತೆಗಳು ಸಾಗಿವೆ.

ಗಂಗಾವತಿ, ಕಾರಟಗಿ ಹಾಗೂ ಕನಕಗಿರಿಯಲ್ಲಿನ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿನ ಬೆಡ್​ಗಳು ಭರ್ತಿಯಾದ ಬಳಿಕ ಈ ಕೇಂದ್ರವನ್ನು ಬಳಸಿಕೊಳ್ಳಲು ಜಿಲ್ಲಾಡಳಿತ ಯೋಜನೆ ರೂಪಿಸಿದೆ.

ಓದಿ:ಅಮ್ಮಾ, ಇದು ನ್ಯಾಯನಾ? ತೃತೀಯ ಲಿಂಗಿ ಎಂದು ಕಂದಮ್ಮನ ನದಿಯಲ್ಲಿ ಬಿಟ್ಟೆಯಲ್ಲ!

ABOUT THE AUTHOR

...view details