ಕರ್ನಾಟಕ

karnataka

ETV Bharat / state

ಗಂಗಾವತಿ ತಾಪಂ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಕಾಂಗ್ರೆಸ್​​​ ಪಾಲು - President of Taluk Panchayat

ತಾಲೂಕು ಪಂಚಾಯತ್​​ನ ಕೊನೆಯ ಹತ್ತು ತಿಂಗಳ ಅಧಿಕಾರಾವಧಿಗೆ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್​ ಜಯಭೇರಿ ಬಾರಿಸಿದೆ. ಈ ಮೂಲಕ ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದ ಭಿ.ಫಕೀರಪ್ಪ ಒಂದು ಮತದ ಅಂತರದಿಂದ ಸೋಲು ಕಂಡು ಮುಖಭಂಗ ಅನುಭವಿಸಿದ್ದಾರೆ.

congress wins again Gangavathi taluk panchayat president post
ಗಂಗಾವತಿ ತಾಲೂಕು ಪಂಚಾಯಿತಿ ಅಧ್ಯಕ್ಷ ಹುದ್ದೆ ಮತ್ತೊಮ್ಮೆ ಕಾಂಗ್ರೆಸ್​ ಪಾಲು

By

Published : Jun 18, 2020, 7:59 PM IST

ಗಂಗಾವತಿ (ಕೊಪ್ಪಳ):ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ತಾಲೂಕು ಪಂಚಾಯತ್​ ಕೊನೆಯ ಹತ್ತು ತಿಂಗಳ ಅಧಿಕಾರಾವಧಿಗೆ ನಡೆದ ಚುನಾವಣೆಯಲ್ಲಿ ಮೊಹಮ್ಮ ರಫಿ ಅಧ್ಯಕ್ಷ ಸ್ಥಾನಕ್ಕೆ ಒಂದು ಮತದ ಅಂತರದಿಂದ ಗಲ್ಲುವ ಮೂಲಕ ಕಾಂಗ್ರೆಸ್ ಅಧಿಕಾರ ಉಳಿಸಿಕೊಂಡಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ಶರಣೇಗೌಡ ಅವಿರೋಧವಾಗ ಆಯ್ಕೆಯಾದರು. ಕಳೆದ 5 ವರ್ಷದಲ್ಲಿ ಸತತ ಅಧಿಕಾರ ಉಳಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದ ಕಾಂಗ್ರೆಸ್, ಕೊನೆಯ ಹತ್ತು ತಿಂಗಳ ಅವಧಿಗೆ ಸ್ಪಷ್ಟ ಬಹುಮತವಿದ್ದರೂ ಕಸರತ್ತು ನಡೆಸಬೇಕಾಗಿ ಬಂದಿತ್ತು.

ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಸದಸ್ಯ ಭಿ.ಫಕೀರಪ್ಪ ಒಂದು ಮತದ ಅಂತರದಿಂದ ಸೋಲುವ ಮೂಲಕ ಮುಖಭಂಗ ಅನುಭವಿಸಿದರು. ಇಬ್ಬರು ಪಕ್ಷೇತರರರು, ಮೂರು ಜನ ಕಾಂಗ್ರೆಸ್ ಹಾಗೂ ಒಬ್ಬ ಬಿಜೆಪಿ ಸದಸ್ಯೆ ಕಾಂಗ್ರೆಸ್​​​ನ ರಫಿಯನ್ನು ಬೆಂಬಲಿಸಿದರು.

ABOUT THE AUTHOR

...view details