ಕರ್ನಾಟಕ

karnataka

ETV Bharat / state

ಗಂಗಾವತಿ: ಮೈಕ್ರೋ ಫೈನಾನ್ಸ್​ ವಿರುದ್ಧ ಕ್ರಿಮಿನಲ್​ ಮೊಕದ್ದಮೆಗೆ ಕಾಂಗ್ರೆಸ್ ಒತ್ತಾಯ

ಕೊರೊನಾ ಲಾಕ್​​​ಡೌನ್​​ನಿಂದಾಗಿ ಬಳಲಿರುವ ರೈತರಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ನೋಟಿಸ್​​ ನೀಡಲು ಮುಂದಾಗಿವೆ. ಲಾಕ್​​ಡೌನ್​ ಸಮಯದಲ್ಲೂ ರೈತರಿಗೆ ನೋಟಿಸ್​ ನೀಡುತ್ತಿರುವ ಫೈನಾನ್ಸ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಗಂಗಾವತಿ ಕಾಂಗ್ರೆಸ್ ಮುಖಂಡರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಮನವಿ ಮಾಡಿದ್ದಾರೆ.

Congress urges to file criminal case against Micro Finance
ಮೈಕ್ರೋ ಫೈನಾನ್ಸ್​ಗಳ ವಿರುದ್ಧ ಕ್ರಿಮಿನಲ್​ ಕೇಸ್ ದಾಖಲಿಸಿ ಗಂಗಾವತಿಯಲ್ಲಿ ಕಾಂಗ್ರೆಸ್ ಒತ್ತಾಯ

By

Published : May 23, 2020, 11:34 PM IST

ಗಂಗಾವತಿ (ಕೊಪ್ಪಳ):ಬಡ ಕುಟುಂಬಗಳಿಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಪ್ರತಿನಿಧಿಗಳು ಸಾಲ ಮರುಪಾವತಿಸುವಂತೆ ಒತ್ತಡ ಹೇರುತ್ತಿದ್ದು, ಈ ಸಂಸ್ಥೆಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಕಾಂಗ್ರೆಸ್ ಮುಖಂಡರು ಒತ್ತಾಯಿಸಿದ್ದಾರೆ.

ಪಟ್ಟಣ ಬ್ಲಾಕ್ ಕಾಂಗ್ರೆಸ್​ ಅಧ್ಯಕ್ಷ ಶಾಮೀದ ಮನಿಯಾರ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಗೀತಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ಬಳಿಕ ಮಾತನಾಡಿದ ಮನಿಯಾರ್, ಸಾಲದ ಕಂತುಗಳನ್ನು ಆಗಸ್ಟ್ ತನಕ ಕಟ್ಟಬೇಕಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದೆ. ಆದರೆ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು, ಕಂತು ಕಟ್ಟುವಂತೆ ದುಂಬಾಲು ಬೀಳುತ್ತಿದ್ದಾರೆ. ಲಾಕ್​​​​ಡೌನ್​ ವೇಳೆ ದುಡಿಯುವ ಕೈಗಳಿಗೆ ಕೆಲಸವಿಲ್ಲ. ಇದರಿಂದ ಬಡವರು ಸಂಕಷ್ಟದಲ್ಲಿ ಕಾಲದೂಡುತ್ತಿದ್ದಾರೆ. ಈಗ ಈ ಹಣಕಾಸು ಸಂಸ್ಥೆಗಳ ಕಿರುಕುಳ ಆರಂಭವಾಗಿದೆ ಎಂದು ಆರೋಪಿಸಿದರು.

ABOUT THE AUTHOR

...view details