ಕರ್ನಾಟಕ

karnataka

ETV Bharat / state

ಕಿಡ್ನಾಪ್ ಆರೋಪಿಗಳ ಬಂಧಿಸುವಂತೆ ಪೊಲೀಸರಿಗೆ ಕಾಂಗ್ರೆಸ್ ಒತ್ತಾಯ - kidnapping case 2020

ಚುನಾಯಿತ ಪ್ರತಿನಿಧಿಗಳನ್ನು ಅಪಹರಣ ಮಾಡುವಂತ ಕೀಳುಮಟ್ಟಕ್ಕೆ ಗಂಗಾವತಿ ರಾಜಕೀಯ ಇಳಿದಿದ್ದು ಅಧಿಕಾರಕ್ಕಾಗಿ ಏನಾದರೂ ಮಾಡಬಲ್ಲೆವು ಎನ್ನುತ್ತಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಇಲ್ಲಿನ ಕಾಂಗ್ರೆಸ್​ ನಿಯೋಗ ಒತ್ತಾಯಿಸಿತು.

Congress urges police to arrest kidnappers
ಕಾಂಗ್ರೆಸ್​ ನಿಯೋಗ

By

Published : Nov 5, 2020, 6:34 PM IST

Updated : Nov 5, 2020, 6:55 PM IST

ಗಂಗಾವತಿ: ನಗರಸಭೆಯ ಕಾಂಗ್ರೆಸ್ ಪಕ್ಷದ ಸದಸ್ಯ ಮನೋಹರಸ್ವಾಮಿ ಅವರ ಅಪಹರಣ ಪ್ರಕರಣದಲ್ಲಿನ ಇತರೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ನಿಯೋಗ ಪೊಲೀಸರನ್ನು ಒತ್ತಾಯಿಸಿ ಮನವಿ ಸಲ್ಲಿಸಿತು.

ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಶಾಮೀದ ಮನಿಯಾರ ಹಾಗೂ ಕೆಪಿಸಿಸಿಯ ಫ್ಯಾನಾಲಿಸ್ಟ್ ಶೈಲಾಜಾ ಹಿರೇಮಠ ನೇತೃತ್ವದಲ್ಲಿ ನಗರ ಪೊಲೀಸ್ ಠಾಣೆಗೆ ತೆರಳಿದ ಕೈ ಕಾರ್ಯಕರ್ತರು ಹಾಗೂ ಮುಖಂಡರ ನಿಯೋಗ, ಪಿಐ ವೆಂಕಟಸ್ವಾಮಿ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿತು.

ಮನವಿ ಪತ್ರ

ಚುನಾಯಿತ ಪ್ರತಿನಿಧಿಗಳನ್ನು ಅಪಹರಣ ಮಾಡುವಂತ ಕೀಳುಮಟ್ಟಕ್ಕೆ ಗಂಗಾವತಿ ರಾಜಕೀಯ ಇಳಿದಿದೆ. ಅಧಿಕಾರಕ್ಕಾಗಿ ಎಂತಹ ಮಟ್ಟಕ್ಕಾದರೂ ಇಳಿಯುತ್ತೇವೆ ಎಂದು ಈ ಮೂಲಕ ಬಿಜೆಪಿಗರು ಸಾಬೀತು ಮಾಡಿದ್ದಾರೆ. ಕೂಡಲೆ ಆರೋಪಿಗಳನ್ನು ಬಂಧಿಸಬೇಕು ಎಂದು ನಿಯೋಗ ಒತ್ತಾಯಿಸಿತು.

ಕಾಂಗ್ರೆಸ್​ ನಿಯೋಗ

ಚುನಾಯತ ಪ್ರತಿನಿಧಿಗಳನ್ನು ಅಪಹರಣ ಮಾಡುವಂತ ಕೆಲಸಕ್ಕೆ ಕೈಹಾಕುವ ಮೂಲಕ ಬಿಜೆಪಿ, ಜನಸಾಮಾನ್ಯರಲ್ಲಿ ಭೀತಿ ಉಂಟು ಮಾಡಿದೆ. ಇದಕ್ಕೆ ಕಡಿವಾಣ ಬೀಳಬೇಕಾದರೆ ಆರೋಪಿಗಳು ಜೈಲು ಸೇರಿ ಕಂಬಿ ಎಣಿಸಬೇಕು ಎಂದು ಮುಖಂಡರು ಒತ್ತಾಯಿಸಿದರು.

Last Updated : Nov 5, 2020, 6:55 PM IST

ABOUT THE AUTHOR

...view details