ಕುಷ್ಟಗಿ (ಕೊಪ್ಪಳ):ದಿನ ಬೆಳಗಾದರೆ (ಅ.27 - ಬೆಳಗ್ಗೆ 10ಕ್ಕೆ) ತಾ.ಪಂ. ಸಭಾಂಗಣದಲ್ಲಿ ನಡೆಯುವ ಕುಷ್ಟಗಿ ಪುರಸಭೆ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆಗೆ ಬಿಜೆಪಿ ಬೆಂಬಲಿಸಿದ ಇಬ್ಬರು ಸದಸ್ಯರಿಗೆ ಕಾಂಗ್ರೆಸ್ ಪಕ್ಷ ಕಡೆಗೂ ಸೋಮವಾರ ರಾತ್ರಿ 8ಕ್ಕೆ ವಿಪ್ ಜಾರಿ ಮಾಡಿದೆ.
ಕಡೆಗೂ ತನ್ನ ಪಕ್ಷದ ಇಬ್ಬರು ಸದಸ್ಯರಿಗೆ ವಿಪ್ ಜಾರಿ ಮಾಡಿದ ಕಾಂಗ್ರೆಸ್ - violation of whip
ನಾಳೆ ಕುಷ್ಟಗಿ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಚುನಾವಣೆ ನಡೆಯುತ್ತಿದ್ದು, ಬಿಜೆಪಿ ಬೆಂಬಲಿಸಿದ ಇಬ್ಬರು ಸದಸ್ಯರಿಗೆ ಕಾಂಗ್ರೆಸ್ ಪಕ್ಷ ವಿಪ್ ಜಾರಿ ಮಾಡಿದೆ. ಪಕ್ಷದ ಕಾರ್ಯಕರ್ತರು ಮನೆ ಬಾಗಿಲಿಗೆ ವಿಪ್ ಪ್ರತಿ ಅಂಟಿಸಿದ್ದಾರೆ.
ಮನೆ ಬಾಗಿಲಿಗೆ ವಿಪ್ ಪ್ರತಿ ಅಂಟಿಸಿದ ಪಕ್ಷದ ಕಾರ್ಯಕರ್ತರು
ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ, ಮಾಜಿ ಸಚಿವರು ಆದ ಶಿವರಾಜ್ ತಂಗಡಗಿ ನೀಡಿದ ವಿಪ್ ಪಕ್ಷದ ಕಾರ್ಯಕರ್ತರು 3ನೇ ವಾರ್ಡ್ ಸದಸ್ಯೆ ಗೀತಾ ತುರಕಾಣಿ ಹಾಗೂ 17ನೇ ವಾರ್ಡ್ ಸದಸ್ಯ ವೀರೇಶ ಬೆದವಟ್ಟಿ ಅವರ ಮನೆಗಳಿಗೆ ತೆರಳಿ ಮನೆ ಬಾಗಿಲಿಗೆ ವಿಪ್ ಪ್ರತಿ ಅಂಟಿಸಿ ಬಂದಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ ಚಿರಂಜೀವಿ ಹಿರೇಮಠ, ಉಪಾಧ್ಯಕ್ಷ ಸ್ಥಾನಕ್ಕೆ ಜರೀನಾ ಬೇಗಂ ಕಾಯಗಡ್ಡಿ ನಾಮಪತ್ರ ಸಲ್ಲಿಸುತ್ತಿದ್ದು, ಇವರ ಪರವಾಗಿ ಸದರಿ ಸದಸ್ಯರು ಮತ ಹಾಕಬೇಕು, ಇಲ್ಲವಾದಲ್ಲಿ ಸದಸ್ಯತ್ವ ಅನರ್ಹತೆಗೆ ಗುರಿಯಾಗುವಿರಿ ಎಂದು ವಿಪ್ನಲ್ಲಿ ತಿಳಿಸಲಾಗಿದೆ.