ಗಂಗಾವತಿ :ರಾಜ್ಯ ರಾಜಕಾರಣದ ಗಮನ ಸೆಳೆದಿರುವ ಮಸ್ಕಿ ವಿಧಾನಸಭಾ ಚುನಾವಣೆ ಬಿಜೆಪಿ-ಕಾಂಗ್ರೆಸ್ ಮಧ್ಯೆ ಟಫ್ ವಾರ್‌ನಂತಾಗಿದೆ. ಇದೀಗ ಕ್ಷೇತ್ರವನ್ನು ವಶಪಡಿಸಿಕೊಳ್ಳುವ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ ವಿಭಿನ್ನ ತಂತ್ರದ ಮೊರೆ ಹೋಗಿದೆ.
ಗಂಗಾವತಿಯ 'ಕೈ' ನಾಯಕರಿಗೆ ಮಸ್ಕಿ ಚುನಾವಣೆಯ ಜವಾಬ್ದಾರಿ - maski election news
ಹಾಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿಗೆ ಬಳಗಾನೂರು, ಮಾಜಿ ಸಂಸದ ಶಿವರಾಮಗೌಡರಿಗೆ ಗುಡುದೂರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಉಮಲೂಟಿ, ಕೆಪಿಸಿಸಿಯ ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ರಾಜು ನಾಯಕ್ಗೆ ಗುಂಡಾ ಗ್ರಾಮಗಳ ಉಸ್ತುವಾರಿಗೆ ನಿಯೋಜಿಸಲಾಗಿದೆ..
![ಗಂಗಾವತಿಯ 'ಕೈ' ನಾಯಕರಿಗೆ ಮಸ್ಕಿ ಚುನಾವಣೆಯ ಜವಾಬ್ದಾರಿ congress new startergey for maski loksabha election](https://etvbharatimages.akamaized.net/etvbharat/prod-images/768-512-11249100-thumbnail-3x2-new.jpg)
ಕೈ ನಾಯಕರಿಗೆ ಮಸ್ಕಿ ಚುನಾವಣೆಯ ಜವಾಬ್ದಾರಿ
ಇದರ ಭಾಗವಾಗಿ ಗಂಗಾವತಿ ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ನಾಯಕರನ್ನು ಚುನಾವಣಾ ಪ್ರಚಾರದ ಉಸ್ತುವಾರಿಯನ್ನಾಗಿ ಮಸ್ಕಿ ಕ್ಷೇತ್ರದ ನಾನಾ ಗ್ರಾಮಗಳಿಗೆ ನಿಯೋಜಿಸಲಾಗಿದೆ. ಈ ಪೈಕಿ ಡಿಸಿಸಿ ಹಾಲಿ ಅಧ್ಯಕ್ಷ, ಮಾಜಿ ಸಚಿವರು, ಮಾಜಿ ಸಂಸದರೂ ಸೇರಿದ್ದಾರೆ.
ಹಾಲಿ ಡಿಸಿಸಿ ಅಧ್ಯಕ್ಷ ಶಿವರಾಜ ತಂಗಡಗಿಗೆ ಬಳಗಾನೂರು, ಮಾಜಿ ಸಂಸದ ಶಿವರಾಮಗೌಡರಿಗೆ ಗುಡುದೂರು, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಅವರಿಗೆ ಉಮಲೂಟಿ, ಕೆಪಿಸಿಸಿಯ ಎಸ್ಟಿ ಘಟಕ ರಾಜ್ಯ ಉಪಾಧ್ಯಕ್ಷ ರಾಜು ನಾಯಕ್ಗೆ ಗುಂಡಾ ಗ್ರಾಮಗಳ ಉಸ್ತುವಾರಿಗೆ ನಿಯೋಜಿಸಲಾಗಿದೆ.