ಗಂಗಾವತಿ: ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು, ತಮ್ಮ ನಾಯಕನ 58ನೇ ಹುಟ್ಟುಹಬ್ಬದ ಅಂಗವಾಗಿ ಅದ್ಧೂರಿತನ ಕೈಬಿಟ್ಟು ವಿಭಿನ್ನವಾಗಿ ಆಚರಿಸುವ ಮೂಲಕ ಮಾದರಿಯಾಗಿದ್ದಾರೆ.
ಇಕ್ಬಾಲ್ ಅನ್ಸಾರಿ ಹುಟ್ಟುಹಬ್ಬ: ದೇಗುಲಕ್ಕೆ ಸ್ಕ್ರೀನಿಂಗ್ ಮಷಿನ್ ಕೊಡುಗೆ ನೀಡಿದ ಬೆಂಬಲಿಗರು - Screening Machine contribute to temple
ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿರುವುದನ್ನು ಮನಗಂಡಿರುವ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಬೆಂಬಲಿಗರು ತಮ್ಮ ನಾಯಕನ ಹುಟ್ಟುಹಬ್ಬವನ್ನು ದೇಗುಲಕ್ಕೆ ಸ್ಕ್ರೀನಿಂಗ್ ಮಷಿನ್ ನೀಡುವ ಮೂಲಕ ಆಚರಿಸಿದ್ದಾರೆ.
ದೇಗುಲಕ್ಕೆ ಸ್ಕ್ರೀನಿಂಗ್ ಮಷಿನ್ ಕೊಡುಗೆ ನೀಡಿದ ಬೆಂಬಲಿಗರು
ನಗರದ ಎಲ್ಲಾ ಕೋಮಿನ ಪ್ರಾರ್ಥನಾ ಮಂದಿರಕ್ಕೆ ತೆರಳಿದ ಬೆಂಬಲಿಗರು, ದೇಗುಲಕ್ಕೆ ಬರುವ ಭಕ್ತರ ದೇಹದ ಉಷ್ಣಾಂಶ ಪತ್ತೆಹಚ್ಚುವ ಸ್ಕ್ರೀನಿಂಗ್ ಮಷಿನ್ಅನ್ನು ಅಲ್ಲಿನ ಅರ್ಚಕರಿಗೆ ಹಸ್ತಾಂತರಿಸಿದರು. ನಂತರ ಮುಖಂಡರು ಮಂದಿರಕ್ಕೆ ಬರುವ ಭಕ್ತರನ್ನು ತಪಾಸಣೆ ಮಾಡಲು ಯಂತ್ರವನ್ನು ಬಳಸುವಂತೆ ಮನವಿ ಮಾಡಿದರು.
ಕೊರೊನಾ ಸಂದರ್ಭದಲ್ಲಿ ಜನ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆ ಜನಸೇವಕರಾದ ತಮ್ಮ ನಾಯಕನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡುವುದು ಬೇಡ ಎಂಬ ಉದ್ದೇಶಕ್ಕೆ ಈ ಕೆಲಸಕ್ಕೆ ಮುಂದಾಗಿದ್ದೇವೆ. ಇದು ಇತರರಿಗೆ ಮಾದರಿ ಎಂದು ಮುಖಂಡರು ತಿಳಿಸಿದರು.