ಗಂಗಾವತಿ: ರಾಜ್ಯದಲ್ಲಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ಸೋಂಕು ನಿಯಂತ್ರಣವಾಗಬೇಕು. ಜನ ನೆಮ್ಮದಿಯಿಂದ ಜೀವನ ನಡೆಸುವಂತಾಗಬೇಕೆಂದು ಎಂದು ಕಾಂಗ್ರೆಸ್ ನಾಯಕರೊಬ್ಬರು ತಾಲೂಕಿನ ಜಂಗ್ಲಿ ಗ್ರಾಮದ ಮಾರುತೇಶ್ವರನ ಮೊರೆ ಹೋದರು.
ಕೊರೊನಾ ನಿಯಂತ್ರಣಕ್ಕೆ ಜಂಗ್ಲಿಯ ಮಾರುತಿಗೆ ಕೈ ನಾಯಕನಿಂದ ವಿಶೇಷ ಪೂಜೆ - ಗಂಗಾವತಿ ಕೋವಿಡ್ ಅಪ್ಡೇಟ್
ಕೊರೊನಾ ನಿಯಂತ್ರಣವಾಗಿ ಜನ ಮತ್ತೆ ನೆಮ್ಮದಿಯಿಂದ ಬದುಕುವಂತಾಗಲಿ ಎಂದು ಜಂಗ್ಲಿಯ ಮಾರುತಿಗೆ ಕೈ ನಾಯಕರು ವಿಶೇಷ ಪೂಜೆ ಸಲ್ಲಿಸಿದರು.
ಕೊರೊನಾ ನಿಯಂತ್ರಣಕ್ಕೆ ಜಂಗ್ಲಿಯ ಮಾರುತಿಗೆ ಕೈ ನಾಯಕನಿಂದ ವಿಶೇಷ ಪೂಜೆ
ಕಾಂಗ್ರೆಸ್ ಪಕ್ಷದ ಕೆಪಿಸಿಸಿಯ ಎಸ್ಟಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜು ನಾಯಕ್, ಮಾರುತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಆದಷ್ಟು ಬೇಗ ಕೊಪ್ಪಳ ಜಿಲ್ಲೆ ಮತ್ತು ರಾಜ್ಯವನ್ನು ಕೊರೊನಾದಿಂದ ಮುಕ್ತಿ ಮಾಡುವಂತೆ ಪ್ರಾರ್ಥನೆ ಮಾಡಿದರು.
ಬಳಿಕ ಮಾತನಾಡಿದ ರಾಜು ನಾಯಕ್, ಜಿಲ್ಲೆಯಲ್ಲಿ ಅದರಲ್ಲೂ ಗಂಗಾವತಿ ತಾಲೂಕಿನಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗಿದೆ. ವೈದ್ಯಕೀಯ ಲೋಕಕ್ಕೆ ಸವಾಲಾಗಿರುವ ಈ ಕಾಯಿಲೆಗೆ ಸದ್ಯಕ್ಕೆ ದೇವರ ಮೊರೆ ಹೋಗುವ ದಾರಿಬಿಟ್ಟು ಬೇರೆ ಮಾರ್ಗವಿಲ್ಲವಾಗಿದೆ ಎಂದರು.