ಗಂಗಾವತಿ:ಹನುಮ ಜಯಂತಿ ಅಂಗವಾಗಿ ಹನುಮ ಮಾಲೆ ಧರಿಸಿ ಚನ್ನಬಸವ ಸ್ವಾಮಿ ಮಠಕ್ಕೆ ಮಾಜಿ ಸಚಿವ ಶಿವರಾಜ ತಂಗಡಗಿ ಆಗಮಿಸಿದರು. ಈ ಸಂದರ್ಭದಲ್ಲಿ ಹನುಮ ಭಕ್ತರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೇಸರಿ ಶಾಲು ಮತ್ತು ಹೂವಿನ ಹಾರ ಹಾಕಿ ಬೀಳ್ಕೊಟ್ಟರು.
ಕೇಸರಿ ಶಾಲು ಧರಿಸಿ ಹನುಮ ಭಕ್ತರ ಬೀಳ್ಕೊಟ್ಟ ಇಕ್ಬಾಲ್ ಅನ್ಸಾರಿ - ಶಿವರಾಜ ತಂಗಡಗಿ ನೇತೃತ್ವದಲ್ಲಿ ಬಂದ ಹನುಮ ಭಕ್ತರಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೇಸರಿ ಶಾಲು ಮತ್ತು ಹೂವಿನ ಹಾರ ಹಾಕಿದರು
ಹನುಮ ಜಯಂತಿ ಅಂಗವಾಗಿ ಹನುಮ ಮಾಲೆ ಧರಿಸಿ ಮಾಜಿ ಸಚಿವ ಶಿವರಾಜ ತಂಗಡಗಿ ನೇತೃತ್ವದಲ್ಲಿ ಆಗಮಿಸಿದ್ದ ನೂರಾರು ಹನುಮ ಭಕ್ತರನ್ನು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೇಸರಿ ಶಾಲು ಧರಿಸಿ ಬೀಳ್ಕೊಟ್ಟರು.
ಶಿವರಾಜ ತಂಗಡಗಿ ನೇತೃತ್ವದಲ್ಲಿ ಬಂದ ಹನುಮ ಭಕ್ತರಿಗೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಕೇಸರಿ ಶಾಲು ಮತ್ತು ಹೂವಿನ ಹಾರ ಹಾಕಿದರು
ಇದೇ ಮೊದಲ ಬಾರಿಗೆ ಮಾಲೆ ಧರಿಸಿದ ಮಾಜಿ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ ತಂಗಡಗಿ ಅವರಿಗೆ ಶುಭಾಶಯ ಕೋರಲು ಆಗಮಿಸಿದ್ದ ಅನ್ಸಾರಿ, ಕೇಸರಿ ಶಾಲು ಧರಿಸುವ ಮೂಲಕ ಗಮನ ಸೆಳೆದರು. ಅನ್ಸಾರಿ ಜೊತೆ ಅವರ ಬೆಂಬಲಿಗರು, ಮುಸ್ಲಿಂ ಸಮುದಾಯದ ಯುವಕರೂ ಕೇಸರಿ ಶಾಲು ಧರಿಸಿದ್ದರು. ಕುಷ್ಟಗಿ ಶಾಸಕ ಅಮರೇಗೌಡ ಬೈಯಾಪುರ, ಮಾಜಿ ಸಂಸದ ಶಿವರಾಮಗೌಡ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ ಸೇರಿದಂತೆ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಭಾಗಿಯಾಗಿದ್ದರು.
ಇದನ್ನೂ ಓದಿ:ಸಿಎಂ ಬೊಮ್ಮಾಯಿಗೆ ರಾಜೀನಾಮೆ ಪತ್ರ ಸಲ್ಲಿಸಿದ ಕೆ.ಎಸ್.ಈಶ್ವರಪ್ಪ