ಕರ್ನಾಟಕ

karnataka

ETV Bharat / state

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಕಾಮಗಾರಿಗೆ ಕಾಂಗ್ರೆಸ್ ನಿಯೋಗ ಅಸಮಾಧಾನ - ಕಾಲುವೆ ಕಾಮಗಾರಿಗೆ ಕಾಂಗ್ರೆಸ್ ನಿಯೋಗ ಅಸಮಧಾನ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ನೇತೃತ್ವದ ನಿಯೋಗದ ಸದಸ್ಯರು ಸೋಮನಾಳ ಸಮೀಪ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Gangavathi
ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆ

By

Published : Jul 16, 2020, 9:34 PM IST

ಗಂಗಾವತಿ: ತುಂಗಭದ್ರಾ ಎಡದಂಡೆಯ ಮುಖ್ಯ ಕಾಲುವೆಯಲ್ಲಿ ನಡೆಯುತ್ತಿರುವ 63 ಕೋಟಿ ರೂಪಾಯಿ ಮೊತ್ತದ ಕಾಮಗಾರಿ ಬೋಗಸ್ ಆಗಿದ್ದು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಹಣ ಕೊಳ್ಳೆ ಹೊಡೆಯಲು ರೂಪಿಸಿದ ತಂತ್ರ ಎಂದು ಕಾಂಗ್ರೆಸ್ ಪಕ್ಷದ ಮುಖಂಡರು ಆರೋಪಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಅಮರೇಶ ಗೋನಾಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ನೇತೃತ್ವದಲ್ಲಿ ಕಾಲುವೆ ಕಾಮಗಾರಿ ಸ್ಥಳಕ್ಕೆ ಭೇಟಿ ಮತ್ತು ಗುಣಮಟ್ಟ ಪರಿಶೀಲನೆಗಾಗಿ ಪಕ್ಷದಿಂದ ರಚನೆಯಾದ ನಿಯೋಗದ ಸದಸ್ಯರು ಸೋಮನಾಳ ಸಮೀಪ ನಡೆಯುತ್ತಿರುವ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಸಮಿತಿ ಸದಸ್ಯರು, ಕಳೆದ ಒಂದೂವರೆ ತಿಂಗಳ ಹಿಂದೆಯೇ ಕಾಮಗಾರಿ ಆರಂಭವಾಗಬೇಕಿತ್ತು. ಆದರೆ ಈಗ ಆರಂಭಿಸಲಾಗಿದೆ. 63 ಕೋಟಿ ಮೊತ್ತ ಮಂಜೂರಾಗಿದ್ದು, ಕೇವಲ ಮೈಲ್ ನಂಬರ್ 39ರಲ್ಲಿ ಕೇವಲ ಒಂದು ಕಿ.ಮೀ ಮಾತ್ರ ಕಾಮಗಾರಿ ಆರಂಭಿಸಲಾಗಿದೆ. ಅದೂ ಕಳೆಯಾಗಿದೆ ಎಂದು ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ABOUT THE AUTHOR

...view details