ಗಂಗಾವತಿ:ಬಸ್ ಪಾಸ್ ತೋರಿಸುವಂತೆ ಒತ್ತಾಯಿಸಿ ಸಾರಿಗೆ ಸಂಸ್ಥೆಯ ಕಂಡಕ್ಟರ್ ಒಬ್ಬರು ಸುಮಾರು ಐವತ್ತಕ್ಕೂ ಹೆಚ್ಚು ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಟೋಲ್ ಗೇಟ್ನಲ್ಲಿ ಇಳಿಸಿ ಕೆಲಕಾಲ ಸತಾಯಿಸಿದ ಘಟನೆ ತಾಲೂಕಿನ ಮರಳಿಯಲ್ಲಿ ನಡೆದಿದೆ.
ಪಾಸ್ ತೋರಿಸುವಂತೆ ವಿದ್ಯಾರ್ಥಿಗಳನ್ನು ಬಸ್ನಿಂದ ಇಳಿಸಿದ ಕಂಡಕ್ಟರ್ ಓದಿ: ಶಿವನಿಗೆ ಅಪಮಾನ ಆರೋಪ.. ಅಮೇಝಾನ್ ಪ್ರೈಮ್ ಮುಖ್ಯಸ್ಥೆ, ಸೈಫ್ ವಿರುದ್ಧ FIR..
ಮಸ್ಕಿ ಘಟಕದ ಲಿಂಗಸುಗೂರು, ಸಿಂಧನೂರು, ಗಂಗಾವತಿ ಮಾರ್ಗದ ಬಸ್ ಕಂಡಕ್ಟರ್ ವಿದ್ಯಾರ್ಥಿಗಳಿಗೆ ತೊಂದರೆ ನೀಡಿದ್ದಾರೆ ಎನ್ನಲಾಗಿದೆ. ಶ್ರೀರಾಮನಗರ, ಪ್ರಗತಿನಗರದಿಂದ ಗಂಗಾವತಿಗೆ ತೆರಳಲು ಸುಮಾರು ಐವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬಸ್ ಏರಿದ್ದಾರೆ. ಆದರೆ ಮಾರ್ಗ ಮಧ್ಯೆ ಮರಳಿ ಬಳಿ ವಾಹನ ನಿಲ್ಲಿಸಿದ ಕಂಡಕ್ಟರ್, ಪಾಸು ತೋರಿಸಬೇಕು, ಇಲ್ಲ ಕಳೆದ ವರ್ಷದ ಪಾಸನ್ನು ತೋರಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಇನ್ನೂ ಶಾಲೆ-ಕಾಲೇಜು ಪೂರ್ಣ ಪ್ರಮಾಣದಲ್ಲಿ ಆರಂಭವಾಗಿಲ್ಲ. ಸರ್ಕಾರದಿಂದ ಪಾಸು ವಿತರಣೆಯಾಗಿಲ್ಲ ಎಂದು ಮಕ್ಕಳು ಹೇಳಿದ್ದಾರೆ. ಆದರೆ ಕಂಡಕ್ಟರ್ ಇದಕ್ಕೆ ಒಪ್ಪಿಲ್ಲ. ಶಾಲಾ ಐಡೆಂಟಿಟಿ ಕಾರ್ಡ್ ಮತ್ತು ದೃಢೀಕರಣ ಪತ್ರ ತೋರಿಸಿದರೂ ಮಕ್ಕಳನ್ನು ವಾಹನದಲ್ಲಿ ಕರೆತರಲು ನಿರ್ವಾಹಕ ಒಪ್ಪಿಲ್ಲ. ಕೊನೆಗೆ ವಿದ್ಯಾರ್ಥಿಗಳು ವಾಹನ ತಡೆ ಹಿಡಿದು ಪ್ರತಿಭಟನೆ ನಡೆಸುವ ಬೆದರಿಕೆ ಹಾಕಿದ ಬಳಿಕ ಮಕ್ಕಳನ್ನು ಕರೆತಂದಿದ್ದಾರೆ.