ಕುಷ್ಟಗಿ (ಕೊಪ್ಪಳ): ಕೆಎಸ್ಆರ್ಟಿಸಿ ಬಸ್ನಲ್ಲಿ ವ್ಯಕ್ತಿಯೊಬ್ಬ ತನ್ನ ಜೊತೆ ತೆಗೆದುಕೊಂಡು ಹೊರಟಿದ್ದ ಕೋಳಿಗೂ ಅರ್ಧ ಟಿಕೆಟ್ ನೀಡಿರುವ ಪ್ರಸಂಗ ನಡೆದಿದೆ. ಹೈದರಾಬಾದ್ನಿಂದ ಗಂಗಾವತಿಗೆ ಆಗಮಿಸಿದ ಕಲ್ಯಾಣ ಕರ್ನಾಟಕ ಬಸ್ನಲ್ಲಿ ಕೋಳಿಯೊಂದಕ್ಕೆ ಅರ್ಧ ಟಿಕೆಟ್ ನೀಡಿದ್ದು, ಕೋಳಿ ಮಾಲೀಕ 463 ರೂಪಾಯಿ ನೀಡಿ ಟಿಕೆಟ್ ಪಡೆದಿದ್ದಾನೆ.
ಸಾಕು ಪ್ರಾಣಿಗಳಿಗೆ ಬಸ್ನಲ್ಲಿ ಅರ್ಧ ಟಿಕೆಟ್ ನೀಡುವ ಆದೇಶ ಜಾರಿಯಲ್ಲಿದೆ. ಅದರಂತೆ ನಿರ್ವಾಹಕ ಟಿಕೆಟ್ ನೀಡಿದ್ದು, ಈ ಕುರಿತು ಪರ-ವಿರೋಧ ಚರ್ಚೆಗಳು ಸಹ ನಡೆಯುತ್ತಿವೆ.