ಗಂಗಾವತಿ:ತಾಲೂಕಿನ ಆನೆಗೊಂದಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಡೇಬಾಗಿಲು ಹಾಗೂ ಚಿಕ್ಕರಾಂಪುರ ಸರ್ಕಾರಿ ಶಾಲೆಗಳು ಗುಡ್ಡಗಾಡು ಪ್ರದೇಶದಲ್ಲಿವೆ. ಹಾಗಾಗಿ, ವನ್ಯಪ್ರಾಣಿಗಳ ದಾಳಿಯ ಭಯವಿತ್ತು. ಆದರೆ ನರೇಗಾ ಯೋಜನೆಯಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಿಕೊಡುವ ಮೂಲಕ ಪಂಚಾಯತ್ ರಾಜ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಜನರು ಮತ್ತು ಮಕ್ಕಳ ಆತಂಕ ದೂರ ಮಾಡಿದ್ದಾರೆ.
ನರೇಗಾ ಮೂಲಕ ಶಾಲೆಗಳಿಗೆ ಕಾಂಪೌಂಡ್: ಕಾಡು ಪ್ರಾಣಿಗಳ ದಾಳಿಯಿಂದ ಮುಕ್ತಿ - Gangavathi
ಕಡೇಬಾಗಿಲು ಹಾಗೂ ಚಿಕ್ಕರಾಂಪುರ ಸರ್ಕಾರಿ ಶಾಲೆಗಳು ಗುಡ್ಡಗಾಡು ಪ್ರದೇಶದಲ್ಲಿರುವುದರಿಂದ ವನ್ಯಪ್ರಾಣಿಗಳ ದಾಳಿಯ ಆತಂಕ ಎದುರಾಗಿತ್ತು. ಆದರೆ ನರೇಗಾ ಯೋಜನೆಯಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ ಮಾಡಲಾಗಿದ್ದು, ಇದರಿಂದ ಪೋಷಕರು ಮತ್ತು ಮಕ್ಕಳ ಆತಂಕ ದೂರವಾಗಿದೆ.
ನರೇಗಾ ಯೋಜನೆಯಡಿ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣ
ಈ ಹಿಂದೆ, ಸ್ಥಳಕ್ಕೆ ಭೇಟಿ ನೀಡಿದ ತಾಲೂಕು ಪಂಚಾಯಿತಿ ಇಒ ಡಾ.ಡಿ.ಮೋಹನ್ ಅವರಿಗೆ ಗ್ರಾಮಸ್ಥರು, ಮಕ್ಕಳ ರಕ್ಷಣೆಗಾಗಿ ಶಾಲೆಗೆ ಕಾಂಪೌಂಡ್ ನಿರ್ಮಾಣದ ಅಗತ್ಯತೆಯ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ತಕ್ಷಣ ಸ್ಪಂದಿಸಿದ ಅಧಿಕಾರಿ, ಲಾಕ್ಡೌನ್ ಮುನ್ನವೇ ಶಾಲೆಗಳಿಗೆ ಕಾಂಪೌಂಡ್ ನಿರ್ಮಾಣಕ್ಕೆ ನರೇಗಾದಲ್ಲಿ ಯೋಜನೆ ರೂಪಿಸಿಕೊಟ್ಟಿದ್ದರು.
ಸದ್ಯ ಕಾಂಪೌಂಡ್ ನಿರ್ಮಾಣವಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಇಒ ಮೋಹನ್ ಪರಿಶೀಲನೆ ನಡೆಸಿದ್ದಾರೆ.