ಕರ್ನಾಟಕ

karnataka

ETV Bharat / state

ರಸ್ತೆ ಗುಣಮಟ್ಟದ ಬಗ್ಗೆ ದೂರು: ಸ್ಥಳಕ್ಕೆ ಭೇಟಿ ನೀಡಿ ತಾಂತ್ರಿಕ ಮಾಹಿತಿ ಪರಿಶೀಲಿಸಿದ ಎಸಿಬಿ - ಕನಕಗಿರಿ ಮುನಿರಾಬಾದ್ ರಾಜ್ಯ ಹೆದ್ದಾರಿ

ಗಂಗಾವತಿ ನಗರದ ಮೂಲಕ ಹಾಯ್ದು ಹೋಗಿರುವ ಕನಕಗಿರಿ ಮುನಿರಾಬಾದ್ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯಿಂದ ಡಾಂಬರ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಸ್ತೆ ಗುಣಮಟ್ಟ ಸರಿಯಿಲ್ಲವೆಂದು ದೂರು ದಾಖಲಾಗಿತ್ತು.

Complaints about road quality
ರಸ್ತೆಗುಣಮಟ್ಟದ ಬಗ್ಗೆ ದೂರು: ತಾಂತ್ರಿಕ ಮಾಹಿತಿ ಪರಿಶೀಲಿಸಿದ ಎಸಿಬಿ

By

Published : Nov 9, 2020, 8:08 PM IST

ಗಂಗಾವತಿ:ಕಳಪೆ ಗುಣಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಿ ಗುತ್ತಿಗೆದಾರರು ಸರ್ಕಾರದ ಅಪಾರ ಪ್ರಮಾಣ ಹಣ ಪೋಲು ಮಾಡಿದ್ದಾರೆ ಎಂದು ಆರೋಪಿಸಿ ದಾಖಲಾಗಿದ್ದ ದೂರಿನ ಅನ್ವಯ ಸ್ಥಳ ಪರಿಶೀಲನೆ ನಡೆಸಿದ ಲೋಕಾಯುಕ್ತ ಪೊಲೀಸರು, ಕ್ವಾಲಿಟಿ ಟೆಸ್ಟ್ ಮಾಡಿಸಿದ ಘಟನೆ ನಡೆಯಿತು.

ರಸ್ತೆಗುಣಮಟ್ಟದ ಬಗ್ಗೆ ದೂರು: ತಾಂತ್ರಿಕ ಮಾಹಿತಿ ಪರಿಶೀಲಿಸಿದ ಎಸಿಬಿ

ಗಂಗಾವತಿ ನಗರದ ಮೂಲಕ ಹಾಯ್ದು ಹೋಗಿರುವ ಕನಕಗಿರಿ-ಮುನಿರಾಬಾದ್ ರಾಜ್ಯ ಹೆದ್ದಾರಿಯಲ್ಲಿ ಇತ್ತೀಚೆಗೆ ಲೋಕೋಪಯೋಗಿ ಇಲಾಖೆಯಿಂದ ಡಾಂಬರ ರಸ್ತೆ ನಿರ್ಮಾಣ ಮಾಡಲಾಗಿತ್ತು. ಆದರೆ ಗುಣಮಟ್ಟ ಸರಿಯಿಲ್ಲ ಎಂಬ ಕಾರಣಕ್ಕೆ ಮಲ್ಲಾಪುರದ ಯುವಕ ಶ್ರೀನಿವಾಸ ನಾಯಕ್ ಎಂಬುವರು ದೂರು ಸಲ್ಲಿಸಿದ್ದರು.

ಈ ಹಿನ್ನೆಲೆ ಲೋಕಾಯುಕ್ತ ಇಲಾಖೆಯ ತಾಂತ್ರಿಕ ವಿಭಾಗದ ಡಿವೈಎಸ್ಪಿ ಅರವಿಂದ್ ಎಂಬುವರ ನೇತೃತ್ವದಲ್ಲಿ ಆಗಮಿಸಿದ ತಂಡ ಬಂಡಿಬಸಪ್ಪ ಕ್ಯಾಂಪ್ ಹಾಗೂ ಕೃಷ್ಣಪುರ ಮಧ್ಯದಲ್ಲಿನ ರಸ್ತೆಯನ್ನು ಆಯ್ದುಕೊಂಡು ಸ್ಯಾಂಪಲ್ ಕಲೆಕ್ಟ್ ಮಾಡಿದರು. ಲೋಕೋಪಯೋಗಿ ಇಲಾಖೆಯ ಜೆಇ ರಾಜಪ್ಪ ಸೇರಿದಂತೆ ಕ್ವಾಲಿಟಿ ಕಂಟ್ರೋಲ್ ತಂಡದ ಸದಸ್ಯರು ಇದ್ದರು.

ABOUT THE AUTHOR

...view details