ಗಂಗಾವತಿ:ಬಿಜೆಪಿ ಬೆಂಬಲಿತ ನಗಗರಸಭಾ ಸದಸ್ಯರು, ನಗರ ಮತ್ತು ತಾಲೂಕಿನ ಗ್ರಾಮೀಣ ಭಾಗದಲ್ಲಿ ಅಕ್ರಮವಾಗಿ ಅಂದರ್ ಬಾಹರ್ ಇಸ್ಪೀಟ್ ಕ್ಲಬ್ ನಡೆಸುತ್ತಿದ್ದು, ಈ ಕೂಡಲೇ ಅದನ್ನು ಬಂದ್ ಮಾಡಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಸ್ವತಃ ಬಿಜೆಪಿ ಮುಖಂಡರೇ ದೂರು ನೀಡಿರುವ ಘಟನೆ ಬೆಳಕಿಗೆ ಬಂದಿದೆ.
ಗಂಗಾವತಿ; ಅಂದರ್ ಬಾಹರ್ ಇಸ್ಪೀಟ್ ಕ್ಲಬ್ ಬಂದ್ ಮಾಡಿಸುವಂತೆ ದೂರು! - ಗಂಗಾವತಿ ಜೂಜಾಟ ನ್ಯೂಸ್
ನಗರಸಭಾ ಸದಸ್ಯರಾದ ರಮೇಶ ಚೌಡ್ಕಿ, ಪರಶುರಾಮ ಮಡ್ಡೇರ, ವೆಂಕಟರಮಣ ಹಾಗೂ ಸದಸ್ಯೆಯೊಬ್ಬರ ಪತಿ ಸೋಮನಾಥ ಕಂಪ್ಲಿ ಮತ್ತು ಬಿಜೆಪಿ ಯುವ ಮುಖಂಡ ಚಂದ್ರಶೇಖರ ಹೀರೂರು ಅಕ್ರಮವಾಗಿ ಇಸ್ಪೀಟ್ ಜೂಜಾಟಗಳನ್ನು ಆಡಿಸುತ್ತಿದ್ದು, ಅದನ್ನು ಈ ಕೂಡಲೇ ತಡೆಯಬೇಕು ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
![ಗಂಗಾವತಿ; ಅಂದರ್ ಬಾಹರ್ ಇಸ್ಪೀಟ್ ಕ್ಲಬ್ ಬಂದ್ ಮಾಡಿಸುವಂತೆ ದೂರು! Complaint as stops the ispit club](https://etvbharatimages.akamaized.net/etvbharat/prod-images/768-512-05:45:46:1595160946-kn-gvt-01-18-bjp-councilers-lead-illigel-cards-club-alligetion-pic-kac10005-18072020115848-1807f-1595053728-1101.jpg)
ನಗರಸಭಾ ಸದಸ್ಯರಾದ ರಮೇಶ ಚೌಡ್ಕಿ, ಪರಶುರಾಮ ಮಡ್ಡೇರ, ವೆಂಕಟರಮಣ ಹಾಗೂ ಸದಸ್ಯೆಯೊಬ್ಬರ ಪತಿ ಸೋಮನಾಥ ಕಂಪ್ಲಿ ಮತ್ತು ಬಿಜೆಪಿ ಯುವ ಮುಖಂಡ ಚಂದ್ರಶೇಖರ ಹೀರೂರು ಅಕ್ರಮವಾಗಿ ಇಸ್ಪೀಟ್ ಜೂಜಾಟಗಳನ್ನು ಆಡಿಸುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಅಧಿಕಾರಿಗಳ ಮೇಲೆಯೇ ಪ್ರಭಾವ ಬೀರುವಷ್ಟು ರಾಜಕೀಯ ಬಲ ಹೊಂದಿರುವ ಕಾರಣಕ್ಕೆ ನಗರ ಮತ್ತು ಗ್ರಾಮೀಣ ಠಾಣೆಯ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಮುಖಂಡ ಆರತಿ ತಿಪ್ಪಣ್ಣ ಮತ್ತು ಬಹುಜನ ಸಮಾಜ ಪಕ್ಷದ ಜಿಲ್ಲಾ ಸಂಚಾಲಕ ಹುಲ್ಲೇಶ ದೇವರಮನಿ ಅವರು ಡಿವೈಎಸ್ ಪಿ ಚಂದ್ರಶೇಖರವರಿಗೆ ದೂರು ನೀಡಿದ್ದಾರೆ.
ಸಿಬಿಎಸ್ ಗಂಜ್ನ ಹಮಾಲರ ಕಾಲೋನಿಯ ವ್ಯಾಪಾರ ಮಳಿಗೆ ಮತ್ತು ನಿವೃತ್ತ ಉಗ್ರಾಣ ವ್ಯವಸ್ಥಾಪಕ ಬಸವರಾಜ ಹೀರೂರು ಅವರಿಗೆ ಸೇರಿದ ವಿಠಲಾಪುರದ ತೋಟದ ಮನೆಯಲ್ಲಿ ಇಸ್ಪೀಟ್ ಕ್ಲಬ್ ನಡೆಯುತ್ತಿವೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ನಿತ್ಯ ಗೋವಾ, ಮಹಾರಾಷ್ಟ್ರ, ಆಂಧ್ರ, ತೆಲಂಗಾಣ ರಾಜ್ಯ ಸೇರಿದಂತೆ ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ ಮೊದಲಾದ ಕಡೆಗಳಿಂದ ಜೂಜುಕೋರರು ಆಗಮಿಸುತ್ತಿದ್ದು, ವಾರಕ್ಕೆ ಕೋಟ್ಯಾಂತರ ರೂಪಾಯಿ ಮೊತ್ತದ ಅಕ್ರಮ ಇಸ್ಪೀಟ್ ಆಟ ನಡೆಸಲಾಗುತ್ತಿದೆ ಎಂದು ದೂರುದಾರರು ಪೊಲೀಸರಿಗೆ ನೀಡಿರುವ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.