ಗಂಗಾವತಿ:ನಗರದ ಸರ್ವೇ ನಂಬರ್ 56ರಲ್ಲಿ ನಗರಸಭೆಯ ಪೌರ ನೌಕರರಿಗೆ ಮೀಸಲಿಟ್ಟ ಸ್ಥಳವನ್ನು ಒತ್ತುವರಿ ಮಾಡಿಕೊಳ್ಳಲು ಯತ್ನಿಸಿದ ಪ್ರಭಾವಿ ವ್ಯಕ್ತಿಯ ವಿರುದ್ಧ ನಗರಸಭೆಯ ಕಮಿಷನರ್ ದೂರು ದಾಖಲಿಸಿದ್ದಾರೆ.
ಪೌರ ನೌಕರರಿಗೆ ಮೀಸಲಿಟ್ಟ ಜಾಗ ಒತ್ತುವರಿ ಆರೋಪ: ಗಂಗಾವತಿಯಲ್ಲಿ ಪ್ರಭಾವಿ ವಿರುದ್ಧ ದೂರು - ಗಂಗಾವತಿ ಪೌರಾಯುಕ್ತ ಗಂಗಾಧರ್
ಪೌರ ನೌಕರರಿಗೆ ಮೀಸಲಿಟ್ಟ ಸ್ಥಳ ಒತ್ತುವರಿಗೆ ಯತ್ನಿಸಿದ ವ್ಯಕ್ತಿಯ ವಿರುದ್ಧ ಗಂಗಾವತಿಯ ನಗರಸಭೆಯ ಕಮಿಷನರ್ ದೂರು ದಾಖಲಿಸಿದ್ದಾರೆ.
ಸ್ಥಳವನ್ನು ಕಬಳಿಸುವ ಉದ್ದೇಶಕ್ಕೆ ಕೆಲ ಅಪರಿಚಿತರು ಸಿಮೆಂಟ್ ಕಂಬಗಳನ್ನು ಹಾಕಿದ್ದಾರೆ. 40*60 ಹಾಗೂ 30*40ರ ಸೈಜ್ನ ನಿವೇಶನ ಕಬಳಿಸುವ ಹುನ್ನಾರ ಅಪರಿಚಿತರು ನಡೆಸಿದ್ದು, ಈ ಬಗ್ಗೆ ಸಾರ್ವಜನಿಕರು ಪೌರಾಯುಕ್ತರಿಗೆ ದೂರು ನೀಡಿದ್ದರು. ಸ್ಥಳ ಪರಿಶೀಲಿಸಿದ ಪೌರಾಯುಕ್ತ ಗಂಗಾಧರ್, ಸಿಮೆಂಟ್ ಕಂಬಗಳನ್ನು ತೆರವು ಮಾಡಿಸಿ ಸ್ಥಳವನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ನಗರ ಠಾಣೆಗೆ ದೂರು ಸಲ್ಲಿಸಿ ಜಾಗವನ್ನು ಪೌರನೌಕರರಿಗೆ ಮೀಸಲಿಡಲಾಗಿದೆ. ಅಲ್ಲಿ ಈಗಾಗಲೇ ಗೃಹ ಭಾಗ್ಯ ಯೋಜನೆಯಡಿ ಮನೆ ನಿರ್ಮಿಸಿಕೊಳ್ಳುತ್ತಿದ್ದಾರೆ. ಆದರೆ, ಕೆಲವರು ಒತ್ತುವರಿಗೆ ಯತ್ನಿಸಿದ್ದು ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ.