ಗಂಗಾವತಿ:ಕಂಪ್ಲಿ ರಸ್ತೆಯಲ್ಲಿರುವ ಸ್ಪಂದನ ಕ್ರೀಡೆ ಮತ್ತು ಮನೋಲ್ಲಾಸ ಕ್ಲಬ್ (ಅಮರ್ ರಿಕ್ರಿಯೇಷನ್ ಕ್ಲಬ್) ಮೇಲೆ ದಾಳಿ ಮಾಡಿದ್ದ ಪೊಲೀಸರು, ಅಕ್ರಮವಾಗಿ ಜೂಜಾಡುತ್ತಿದ್ದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಸುಮಾರು 24 ಜನರ ಮೇಲೆ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೊಪ್ಪಳ, ಬಳ್ಳಾರಿಯ 24 ಜೂಜುಕೋರರ ಮೇಲೆ ದೂರು ದಾಖಲು - ಕೊಪ್ಪಳ ಸುದ್ದಿ
ಕಂಪ್ಲಿ ರಸ್ತೆಯಲ್ಲಿರುವ ಸ್ಪಂದನ ಕ್ರೀಡೆ ಮತ್ತು ಮನೋಲ್ಲಾಸ ಕ್ಲಬ್ ಮೇಲೆ ದಾಳಿ ಮಾಡಿದ್ದ ಪೊಲೀಸರು, 24 ಜನರನ್ನು ವಶಕ್ಕೆ ಪಡೆದು ದೂರು ದಾಖಲಿಸಿದ್ದಾರೆ.
![ಕೊಪ್ಪಳ, ಬಳ್ಳಾರಿಯ 24 ಜೂಜುಕೋರರ ಮೇಲೆ ದೂರು ದಾಖಲು ಜೂಜುಕೋರರ ಮೇಲೆ ಪೊಲೀಸ್ ದಾಳಿ](https://etvbharatimages.akamaized.net/etvbharat/prod-images/768-512-8724413-1071-8724413-1599559540856.jpg)
ಜೂಜುಕೋರರ ಮೇಲೆ ಪೊಲೀಸ್ ದಾಳಿ
ಜೂಜುಕೋರರ ಮೇಲೆ ಪೊಲೀಸ್ ದಾಳಿ
ಕೊಪ್ಪಳದ ಡಿಸಿಐಬಿಯ ಸಿಪಿಐ ಉದಯರವಿ ನೇತೃತ್ವದಲ್ಲಿ ದಾಳಿ ಮಾಡಿದ ಪೊಲೀಸರು, ಬಳಿಕ ನಗರ ಠಾಣೆಯ ಪಿಐ ವೆಂಕಟಸ್ವಾಮಿ ಅವರಿಗೆ ಮಾಹಿತಿ ನೀಡಿದ್ದಾರೆ. ನಾನಾ ವಲಯದಲ್ಲಿ ಕೆಲಸ ಮಾಡುತ್ತಿರುವ ಒಟ್ಟು 24 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
39,410 ರೂ. ನಗದು, 13 ದ್ವಿಚಕ್ರ ವಾಹನ, ಒಂದು ಕಾರು ಹಾಗೂ 21 ಮೊಬೈಲ್ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳಿಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.
Last Updated : Sep 8, 2020, 7:43 PM IST