ಗಂಗಾವತಿ: 150ನೇ ಗಾಂಧೀಜಿ ಜಯಂತಿ ಹಾಗೂ ಲಾಲ್ ಬಹಾದ್ಧೂರ್ ಶಾಸ್ತ್ರಿ ಜಯಂತಿ ಅಂಗವಾಗಿ ಇಲ್ಲಿನ ನಗರಸಭೆ ವಿನೂತನ ಕಾರ್ಯಕ್ರಮವನ್ನು ಅಕ್ಟೋಬರ್ 3ರಿಂದ ಹಮ್ಮಿಕೊಳ್ಳಲು ನಗರಸಭೆ ಸಿದ್ಧತೆ ಎಂದು ನಗರಸಭೆ ಆಯುಕ್ತ ಡಾ.ಡಿ.ಎಂ.ದೊಡ್ಡಮನಿ ಹೇಳಿದರು.
ಗಾಂಧಿ ಜಯಂತಿ ಅಂಗವಾಗಿ ಗಂಗಾವತಿಯಲ್ಲಿ ನಾಳೆ ಪ್ಲಾಸ್ಟಿಕ್ ಆಯುವ ಸ್ಪರ್ಧೆ! - koppal latest news
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ನಗರಸಭೆಯಿಂದ ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಏರ್ಪಡಿಸಲಾಗಿದೆ. ಇದರಿಂದ ಪ್ಲಾಸ್ಟಿಕ್ ಕುರಿತ ಜಾಗೃತಿಯನ್ನು ಮೂಡಿಸಲಾಗುವುದು ಎಂದು ನಗರಸಭೆ ಆಯುಕ್ತ ಡಾ.ಡಿ.ಎಂ.ದೊಡ್ಡಮನಿ ತಿಳಿಸಿದ್ದಾರೆ.

ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಹಮ್ಮಿಕೊಂಡ ನಗರ ಸಭೆ
ಗಾಂಧಿ ಜಯಂತಿ ಅಂಗವಾಗಿ ವಿನೂತನ ಸ್ಪರ್ಧೆ ಹಮ್ಮಿಕೊಂಡ ನಗರ ಸಭೆ
ಪ್ಲಾಸ್ಟಿಕ್ ಬಗ್ಗೆ ಜಾಗೃತಿ ಮೂಡಿಸುವ ಕುರಿತು ಹೆಚ್ಚು ಪ್ಲಾಸ್ಟಿಕ್ ಸಂಗ್ರಹಿಸುವ ಸ್ಪರ್ಧೆಯನ್ನು ಏರ್ಪಡಿಸಲಾಗುವುದು. 6 ತಂಡಗಳನ್ನು ಆಯ್ಕೆ ಮಾಡಿ ಪ್ಲಾಸ್ಟಿಕ್ ಜಾಗೃತಿ ಜತೆಗೆ ಸಂಗ್ರಹಿಸಲು ಸ್ಪರ್ಧಾರ್ಥಿಗಳು ಮುಂದಾಗಲಿದ್ದಾರೆ.
ಪ್ರಥಮ ಬಹುಮಾನವಾಗಿ ಪ್ರಥಮ ಬಹುಮಾನವಾಗಿ ₹ 15 ಸಾವಿರ, ದ್ವಿತೀಯ ಬಹುಮಾನವಾಗಿ ₹10 ಸಾವಿರ ಹಾಗೂ ತೃತೀಯ ಬಹುಮಾನವಾಗಿ ₹ 5 ಸಾವಿರ ನೀಡಲಾಗುವುದು ಎಂದು ಹೇಳಿದರು.