ಕುಷ್ಟಗಿ (ಕೊಪ್ಪಳ): ಮೊಹರಂ ಹಬ್ಬದ ಸಂದರ್ಭದಲ್ಲಾದರೂ ಕುಡಿಯೋದು ಬೇಡ ಎಂದು ಬುದ್ಧಿವಾದ ಹೇಳಿದ್ದಕ್ಕೆ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಷ್ಟಗಿಯ ಅಡವಿರಾಯ ಕಾಲೋನಿಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ 13ನೇ ವಾರ್ಡ್ ನಿವಾಸಿ ಹಬೀಬ್ ಅಬ್ದುಲ್ ಗಣಿಸಾಬ್ ಕನಕಾಪೂರ (35) ಮೃತ ವ್ಯಕ್ತಿ.
ಮದ್ಯ ವ್ಯಸನಿಯಾಗಿದ್ದ ಹಬೀಬ್ ಮುದಗಲ್ನಲ್ಲಿದ್ದ. ಇತ್ತೀಚೆಗೆ ಕುಷ್ಟಗಿಗೆ ಬಂದಿದ್ದ ವೇಳೆ ಪಾಲಕರು ಕುಡಿತದ ಚಟ ಬಿಡುವಂತೆ ಬುದ್ಧಿ ಹೇಳಿದ್ದರಂತೆ. ಆದರೂ ತಂದೆಯಿಂದ 100 ರೂ. ಪಡೆದು ಹೋಗಿದ್ದ. ಬುಧವಾರ ಬೆಳಗ್ಗೆ ಕುಷ್ಟಗಿ ಪಟ್ಟಣದ ಶಾಖಾಪೂರ ರಸ್ತೆಯ ಅಡವಿರಾಯ ಕಾಲೋನಿಯ ನೋಬಲ್ ಕಾನ್ವೆಂಟ್ ಸ್ಕೂಲ್ ಹಿಂಭಾಗ ನಿರ್ಮಾಣ ಹಂತದ ಮನೆಯಲ್ಲಿ ಈ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ.