ಕೊಪ್ಪಳ:ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಸ್ಯ ಭಾಷಣಕಾರ 'ಗಂಗಾವತಿ ಬೀಚಿ' ಎಂದು ಖ್ಯಾತಿ ಪಡೆದಿರುವ ಗಂಗಾವತಿ ಪ್ರಾಣೇಶ್ ಅಭಿನಂದನಾ ಪತ್ರ ಬರೆದಿದ್ದಾರೆ.
ಪ್ರಧಾನಿಗೆ ಅಭಿನಂದನಾ ಪತ್ರ ಬರೆದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ - ಕೊಪ್ಪಳ ಸುದ್ದಿ ಅಭಿನಂದನಾ ಪತ್ರ ಬರೆದ ಗಂಗಾವತಿ ಪ್ರಾಣೇಶ್
ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿಗೆ ಮಾಡಿರುವ ಪ್ರಧಾನಿಗೆ ಹಾಸ್ಯ ಭಾಷಣಕಾರ ಗಂಗಾವತಿ ಪ್ರಾಣೇಶ್ ಅಭಿನಂದನಾ ಪತ್ರ ಬರೆದಿದ್ದಾರೆ.
![ಪ್ರಧಾನಿಗೆ ಅಭಿನಂದನಾ ಪತ್ರ ಬರೆದ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ koppala](https://etvbharatimages.akamaized.net/etvbharat/prod-images/768-512-5517170-thumbnail-3x2-vid.jpg)
ಗಂಗಾವತಿ ಪ್ರಾಣೇಶ್
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಅಭಿನಂದನಾ ಪತ್ರ ಬರೆದಿರುವ ಬಿ. ಪ್ರಾಣೇಶ್, ಯಾವುದೇ ಸ್ವಾರ್ಥವಿಲ್ಲದೆ ರಾಷ್ಟ್ರ ರಕ್ಷಣೆಗೆ ಪಣತೊಟ್ಟು ಕಾಯ್ದೆ ಜಾರಿ ಮಾಡಿರುವ ತಮಗೆ ಅಭಿನಂದನೆಗಳು. ದೇಶದಲ್ಲಿ ಸಮಾನತೆ, ಮಾನವೀಯ ಮೌಲ್ಯಗಳನ್ನು ನಿರಂತರವಾಗಿ ತಲುಪಿಸುವಲ್ಲಿ ತಾವು ಯಶಸ್ವಿಯಾಗಿದ್ದೀರಿ. ಇದೊಂದು ತಪಸ್ಸು ಎಂದು ಪ್ರಾಣೇಶ್ ಅವರು ಅಭಿನಂದನಾ ಪತ್ರದಲ್ಲಿ ಕೊಂಡಾಡಿದ್ದಾರೆ.
ಇನ್ನು ಬಾಕಿ ಉಳಿದಿರುವ ಕಾನೂನುಗಳನ್ನು ಜಾರಿಗೆ ತರಲು ತಮಗೆ ಶಕ್ತಿ, ಆರೋಗ್ಯ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದ್ದಾರೆ.