ಕೊಪ್ಪಳ:ಸಿಎಂ ಯಡಿಯೂರಪ್ಪ ಕಬಡ್ಡಿ ತಂಡದ ನಾಯಕನಿದ್ದಂತೆ. ಅವರಿಗೆ ಕ್ಯಾಚ್ ಹಾಕುವುದು ಗೊತ್ತು, ರೈಡ್ ಮಾಡುವುದು ಗೊತ್ತು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ರಾಜಾಹುಲಿ ಯಡಿಯೂರಪ್ಪ ಕಬಡ್ಡಿ ತಂಡದ ಕ್ಯಾಪ್ಟನ್ ಇದ್ದಂತೆ: ಸಚಿವ ಆರ್. ಅಶೋಕ್ - Minister R. Ashok
ಯಡಿಯೂರಪ್ಪ ಅವರು ರಾಜಾಹುಲಿ. ಅವರು ಒಂದು ರೀತಿಯಲ್ಲಿ ಕಬಡ್ಡಿ ತಂಡದ ಕ್ಯಾಪ್ಟನ್ ಇದ್ದಂತೆ. ಅವರಿಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
![ರಾಜಾಹುಲಿ ಯಡಿಯೂರಪ್ಪ ಕಬಡ್ಡಿ ತಂಡದ ಕ್ಯಾಪ್ಟನ್ ಇದ್ದಂತೆ: ಸಚಿವ ಆರ್. ಅಶೋಕ್ ಕಂದಾಯ ಸಚಿವ ಆರ್. ಅಶೋಕ್](https://etvbharatimages.akamaized.net/etvbharat/prod-images/768-512-8834988-371-8834988-1600337241452.jpg)
ಕೊಪ್ಪಳದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಭೆ ಬಳಿಕ ಮಾತನಾಡಿದ ಸಚಿವ ಆರ್. ಅಶೋಕ್, ಯಡಿಯೂರಪ್ಪ ಅವರು ರಾಜಾಹುಲಿ. ಇದನ್ನು ನಾನು ಯಾವಾಗಲೋ ಹೇಳಿರುವೆ. ಅವರು ಒಂದು ರೀತಿಯಲ್ಲಿ ಕಬಡ್ಡಿ ತಂಡದ ಕ್ಯಾಪ್ಟನ್ ಇದ್ದಂತೆ. ಅವರಿಗೆ ಕ್ಯಾಚ್ ಹಾಕೋದು ಗೊತ್ತು, ರೈಡ್ ಮಾಡೋದು ಗೊತ್ತು. ಹಣಕಾಸಿನ ವಿಷಯದಲ್ಲಿ ಇಡೀ ದೇಶದಲ್ಲಿ ನಮ್ಮ ರಾಜ್ಯ ಮಾದರಿಯಾಗಿರುತ್ತದೆ. ಇಂದು ಸಿಎಂ ಯಡಿಯೂರಪ್ಪ ಅವರು ದೆಹಲಿಗೆ ಹೋಗಿದ್ದಾರೆ. ಕೇಂದ್ರ ಸರ್ಕಾರದ ಸಚಿವರನ್ನು ಭೇಟಿ ಮಾಡಿ, ಅವರ ಮನವೊಲಿಸಿ ಹೆಚ್ಚು ಅನುದಾನವನ್ನು ರಾಜ್ಯಕ್ಕೆ ತರುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಮುಖ್ಯಮಂತ್ರಿ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ. ಮುಂದಿನ ಮೂರು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿಯಾಗಿರುತ್ತಾರೆ. ಯಾವುದೇ ಸಂದರ್ಭವಾದರೂ ಯಡಿಯೂರಪ್ಪ ಅವರೇ ನಮ್ಮ ಸಿಎಂ ಆಗಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡುತ್ತಾರೆ ಎಂದು ಸಚಿವ ಆರ್. ಅಶೋಕ ಹೇಳಿದರು.