ಕರ್ನಾಟಕ

karnataka

ETV Bharat / state

ಮುಂಬಾಗಿಲು ಬಂದ್ ಮಾಡಿ ಹಿಂಬಾಗಿಲಿನಿಂದ ವ್ಯಾಪಾರ: ಬಟ್ಟೆ ಅಂಗಡಿ ಮಾಲೀಕರಿಂದ ಕಳ್ಳಾಟ - ಕರ್ಫ್ಯೂ ನಿಯಮ ಮೀರಿ ವ್ಯಾಪಾರ

ರಾಜ್ಯದಲ್ಲಿ ಕೋವಿಡ್ ಕರ್ಫ್ಯೂ ಜಾರಿಯಲ್ಲಿರುವುದರಿಂದ ಅಗತ್ಯ ವಸ್ತುಗಳ ಮಾರಾಟಕ್ಕೆ ಮಾತ್ರ ನಿಗದಿತ ಸಮಯದಲ್ಲಿ ಅವಕಾಶ ನೀಡಲಾಗಿದೆ.

Cloth merchants  Violating Curfew Guidelines in Gangavati
ಬಟ್ಟೆ ಅಂಗಡಿ ಮಾಲೀಕರಿಂದ ನಿಯಮ ಉಲ್ಲಂಘನೆ

By

Published : May 6, 2021, 9:35 AM IST

ಗಂಗಾವತಿ:ಕೋವಿಡ್ ಕರ್ಫ್ಯೂ ನಿಯಮ ಉಲ್ಲಂಘಿಸುವವರ ವಿರುದ್ಧಪೊಲೀಸರು ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ ನಗರದ ಕೆಲ ಬಟ್ಟೆ ವ್ಯಾಪಾರಿಗಳು ಹಿಂಬಾಗಿಲಿನ ಮೂಲಕ ವ್ಯಾಪಾರ ವಹಿವಾಟು ನಡೆಸುತ್ತಿರುವುದು ಬೆಳಕಿಗೆ ಬಂದಿದೆ.

ನಗರದ ಮಹಾವೀರ ವೃತ್ತ, ಸಿಬಿಎಸ್ ಸರ್ಕಲ್, ಓಲ್ಡ್ ಓಎಸ್​ಬಿ ರಸ್ತೆಯಲ್ಲಿರುವ ಹತ್ತಾರು ಬಟ್ಟೆ ಅಂಗಡಿಗಳ ಪ್ರಭಾವಿ ಮಾಲೀಕರು ಮುಖ್ಯ ರಸ್ತೆಯಲ್ಲಿರುವ ತಮ್ಮ ಅಂಗಡಿ ಹಾಗೂ ಮಳಿಗೆಗಳ ಮುಂಬಾಗಿಲು ಬಂದ್ ಮಾಡಿದ್ದಾರೆ. ಆದರೆ, ಬಹುತೇಕರು ಹಿಂಬಾಗಿಲಿನ ಮೂಲಕ ವ್ಯವಹಾರ ನಡೆಸುತ್ತಿರುವುದು ಬೆಳಕಿಗೆ ಬಂದಿದೆ. ಗ್ರಾಹಕರನ್ನು ಅಂಗಡಿಯ ಹಿಂಬಾಗಿಲ ಮೂಲಕ ಒಳಗೆ ಬಿಟ್ಟುಕೊಂಡು ಬಾಗಿಲು ಹಾಕಿ ವ್ಯವಹಾರ ಮಾಡುವುದು, ಬಳಿಕ ಅವರನ್ನು ಹೊರಕ್ಕೆ ಕಳುಹಿಸುತ್ತಿದ್ದಾರೆ ಎನ್ನಲಾಗಿದೆ.

ಹಿಂಬಾಗಿಲ ಮೂಲಕ ಗ್ರಾಹಕರನ್ನು ಒಳಗೆ ಬಿಡುತ್ತಿರುವ ದೃಶ್ಯ

ಓದಿ : ಕೊಪ್ಪಳದಲ್ಲಿ 412 ಪಾಸಿಟಿವ್ ಪ್ರಕರಣಗಳು ಪತ್ತೆ, 7 ಸಾವು

ಕದ್ದುಮುಚ್ಚಿ ನಡೆಸಲಾಗುತ್ತಿರುವ ಈ ವ್ಯಹಾರಕ್ಕಾಗಿ ಜನ ಗಂಟೆಗಟ್ಟಲೆ ಅಂಗಡಿ ಸಮೀಪ ಕಾದು ನಿಂತು ಬಟ್ಟೆ ಖರೀದಿಸಿಕೊಂಡು ಹೋಗುತ್ತಿದ್ದಾರೆ. ಮನೆಯಲ್ಲಿ ಶುಭ ಸಮಾರಂಭಗಳಿಗೆ ಹೊಸ ಬಟ್ಟೆ ಅಗತ್ಯ ಇರುವುದನ್ನೇ ವ್ಯಾಪಾರಿಗಳು ಬಂಡವಾಳ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಪೊಲೀಸರ ಕಣ್ಣಿಗೆ ಮಣ್ಣೆರಚುವ ಕಾರ್ಯ ಮಾಡುತ್ತಿದ್ದಾರೆ.

ABOUT THE AUTHOR

...view details