ಕರ್ನಾಟಕ

karnataka

By

Published : Apr 1, 2020, 3:12 PM IST

ETV Bharat / state

ಕೊಪ್ಪಳದಲ್ಲಿ ಲಾಕ್ ಡೌನ್ ಉಲ್ಲಂಘಿಸಿದವರಿಗೆ ಪೊಲೀಸರು ಕೊಟ್ಟ ಶಿಕ್ಷೆ ಏನು ಗೊತ್ತಾ..?

ಲಾಕ್​ ಉಲ್ಲಂಘಿಸಿ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡುವವರಿಗೆ ಪಾಠ ಕಲಿಸಲು ಕೊಪ್ಫಳ ಪೊಲೀಸರು ಉಪಾಯವೊಂದನ್ನು ಮಾಡಿದ್ದು, ಅನಗತ್ಯವಾಗಿ ಓಡಾಡ್ತಿದ್ದವರನ್ನು ಕರೆದುಕೊಂಡು ಹೋಗಿ ಸಾರ್ವಜನಿಕ ಸ್ಥಳಗಳ ಸ್ವಚ್ಚತಾ ಕಾರ್ಯ ಮಾಡಿಸುತ್ತಿದ್ದಾರೆ.

Cleaning Punishment for LOckdownd Violaters in Koppal
ಲಾಕ್ ಡೌನ್ ಉಲ್ಲಂಘಿಸಿದವರಿಗೆ ಕಸ ಗುಡಿಸುವ ಶಿಕ್ಷೆ

ಕೊಪ್ಪಳ :ಕೊರೊನಾ ಹರಡದಂತೆ ದೇಶದಾದ್ಯಂತ ಲಾಕ್​ ಡೌನ್ ಮಾಡಿ ಎಲ್ಲರೂ ಮನೆಯಲ್ಲಿರಿ ಎಂದು ಎಷ್ಟು ಮನವಿ ಮಾಡಿದರೂ ಜನ ಕೇಳ್ತಿಲ್ಲ. ಲಾಠಿ ಚಾರ್ಜ್​ ಮಾಡಿ ಆಯು, ದಂಡ ಕಟ್ಟಿಸಿಕೊಂಡು ಆಯ್ತು, ಆದ್ರೂ ಜನರಿಗೆ ಬುದ್ದಿ ಬರ್ತಿಲ್ಲ. ಅನಗತ್ಯವಾಗಿ ರಸ್ತೆಗಳಲ್ಲಿ ಓಡಾದ್ತಿದ್ದಾರೆ. ಹೀಗಾಗಿ ಇಂತವರಿಗೆ ಬುದ್ದಿ ಕಲಿಸಲು ನಗರ ಪೊಲೀಸರು ಉಪಾಯವೊಂದನ್ನು ಮಾಡಿದ್ದಾರೆ.

ಲಾಕ್ ಡೌನ್ ಉಲ್ಲಂಘಿಸಿ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡ್ತಿದ್ದವರನ್ನು ಕರೆದುಕೊಂಡು ಹೋಗಿ ಸಾರ್ವಜನಿಕ ಸ್ಥಳಗಳ ಸ್ವಚ್ಚತಾ ಕಾರ್ಯ ಮಾಡಿಸುತ್ತಿದ್ದಾರೆ. ಪೊಲೀಸರ ಈ ಉಪಾಯದಿಂದ ಈಗಾಗಲೇ ಪೊಲೀಸ್​ ಠಾಣೆ ಸೇರಿದಂತೆ ಕೆಲ ಸರ್ಕಾರಿ ಕಚೇರಿಗಳ ಆವರಣ ಸ್ವಚ್ಚಗೊಂಡಿದೆ.

For All Latest Updates

TAGGED:

ABOUT THE AUTHOR

...view details