ಕೊಪ್ಪಳ :ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಯುವಕರು ಬಡಿಗೆ ಹಿಡಿದು ಬಡಿದಾಡಿಕೊಂಡ ಘಟನೆ ನಗರದ ಕೇಂದ್ರೀಯ ಬಸ್ ನಿಲ್ದಾಣದ ಬಳಿ ನಡೆದಿದೆ. ಗಲಾಟೆಯಲ್ಲಿ ಬಸವರಾಜ ಎಂಬಾತನ ಮೇಲೆ ರಾಮು ಎಂಬಾತ ಮತ್ತು ಆತನ ಸ್ನೇಹಿತರು ಸೇರಿ ಒಟ್ಟು ಐವರು ಹಲ್ಲೆ ನಡೆಸಿದ್ದಾರೆ.
ಬಸವರಾಜ ಮತ್ತು ರಾಮು ನಡುವೆ ಹಣಕಾಸಿನ ವಿಚಾರಕ್ಕೆ ಗಲಾಟೆಯಾಗಿದೆ. ರಾಮುವಿಗೆ ಬಸವರಾಜ 10 ಸಾವಿರ ರೂಪಾಯಿ ಹಣ ಕೊಟ್ಟಿದ್ದ. ಆ ಹಣವನ್ನು ವಾಪಸ್ ಕೊಡುವಂತೆ ಬಸವರಾಜ ಕೇಳಿದ್ದ. ಆದರೆ, ರಾಮು ಕೊಟ್ಟಿರಲಿಲ್ಲ. ಈ ಕಾರಣಕ್ಕೆ ರಾಮುವಿನ ಬೈಕ್ ಅನ್ನು ಬಸವರಾಜ ತೆಗೆದುಕೊಂಡು ಬಂದಿದ್ದ.