ಕೊಪ್ಪಳ: ಜಿಲ್ಲೆಯ ಕುಷ್ಟಗಿಯಲ್ಲಿನ ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಹಗರಣದ ತನಿಖೆ ಮುಗಿದಿದ್ದು, ದೋಷಾರೋಪ ಪಟ್ಟಿಯನ್ನು ಸಿಐಡಿ ಡಿಸಿಪಿ ಪುರುಷೋತ್ತಮ್ ನೇತೃತ್ವದ ಅಧಿಕಾರಿಗಳ ತಂಡ ಇಂದು ಕೋರ್ಟ್ಗೆ ಸಲ್ಲಿಸಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ಕಳೆದ 2016 ಮೇ 11 ರಂದು ತುಂಡು ಗುತ್ತಿಗೆ ಪ್ರಕರಣದಲ್ಲಿ 26 ಜನ ಅಧಿಕಾರಿಗಳನ್ನು ಅಮಾನತು ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿಂದತೆ ಇಂದು ಆರೋಪ ಪಟ್ಟಿ ಕೋರ್ಟ್ಗೆ ಸಲ್ಲಿಕೆಯಾಗಿದೆ.
ಸಣ್ಣ ನೀರಾವರಿ ಇಲಾಖೆಯಲ್ಲಿ ನಡೆದ ಹಗರಣದ ತನಿಖೆ ಮುಕ್ತಾಯ ಕೆಲಸ ಮಾಡದೇ ಬಿಲ್ ಎತ್ತುವಳಿ ಮಾಡಿದ ಹಿನ್ನೆಲೆ ಏಕಕಾಲದಲ್ಲಿ 26 ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಿಲಾಗಿತ್ತು. 42 ಜನ ಗುತ್ತಿಗೆದಾರರ ವಿರುದ್ಧವೂ ಪ್ರಕರಣ ದಾಖಲಾಗಿತ್ತು. 26 ಜನ ಅಮಾನತಾದ ಬಳಿಕ ಪ್ರಕರಣದ ತನಿಖೆಗಾಗಿ ಸರ್ಕಾರ ಸಿಐಡಿಗೆ ವಹಿಸಿತ್ತು.
ಸಿಐಡಿ ಸುದೀರ್ಘ ಎರಡು ವರ್ಷ ತನಿಖೆ ನಡೆಸಿ ಇಂದು ಚಾರ್ಜ್ ಸೀಟ್ ಸಲ್ಲಿಸಿದೆ. 18 ಜನ ಸರ್ಕಾರಿ ನೌಕರರು ಹಾಗೂ 42 ಜನ ಗುತ್ತಿಗೆದಾರರು ಸೇರಿದಂತೆ ಒಟ್ಟು 60 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.