ಕರ್ನಾಟಕ

karnataka

ETV Bharat / state

ಅಪ್ಪು ನೆನಪಿಗಾಗಿ ಗಿಡ ನೆಟ್ಟ ಚಿಣ್ಣರು : ಫೋಟೋ ವೈರಲ್ - ಮಕ್ಕಳ ಫೋಟೋ ವೈರಲ್

ಅಪ್ಪು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪಿಗಾಗಿ ಮಕ್ಕಳಿಂದ ಸಸಿ ನೆಡುವ ಕಾರ್ಯ ಮಾಡಲಾಗಿದೆ. ಈ ಹಸಿರು ಗಿಡದಂತೆ ಅಪ್ಪು ನೆನಪು ಕೂಡ ಸದಾ ಹಸಿರಾಗಿರಲಿ ಎಂಬುದು ಟ್ರಸ್ಟ್​ನ ಆಶಯವಾಗಿದೆ..

children planting trees
ಅಪ್ಪು ನೆನಪಿಗಾಗಿ ಗಿಡ ನೆಟ್ಟ ಚಿಣ್ಣರು: ಫೋಟೋ ವೈರಲ್

By

Published : Nov 2, 2021, 5:14 PM IST

ಕುಷ್ಟಗಿ (ಕೊಪ್ಪಳ):ಪುನೀತ್​ ರಾಜ​ಕುಮಾರ್​ ಚಿಣ್ಣರಿಗೂ ಅಚ್ಚುಮೆಚ್ಚಿನ ನಟರಾಗಿದ್ದರು. ಅವರ ಕಣ್ಮರೆ ಮಕ್ಕಳಲ್ಲೂ ನೋವು ತಂದಿದೆ. ಪ್ರೀತಿಯ ಅಪ್ಪು ಅಮರರಾಗಿರಲಿ ಎಂದು ಚಿಣ್ಣರು ಗಿಡ ನೆಟ್ಟಿರುವ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ನೆರೆಬೆಂಚಿಯಲ್ಲಿ ದ್ವಾರಕ ಸಾಯಿ ಸೇವಾ ಟ್ರಸ್ಟ್‌ನಿಂದ ಪುನೀತ್​ ರಾಜಕುಮಾರ್​ ನೆನಪಿಗಾಗಿ ಜಮೀನಿನ ಬದುವಿನಲ್ಲಿ ಮಕ್ಕಳ ಕೈಯಿಂದ ಸಸಿಗಳನ್ನು ನೆಡಿಸಿದ್ದಾರೆ.

ಟ್ರಸ್ಟ್​ನ ಕೃಷ್ಣ ಕಂದಕೂರು ಎಂಬುವರು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದರು. ಸದ್ಯ ಈ ಫೋಟೋ ವೈರಲ್ ಆಗಿದ್ದು, ಚಿಣ್ಣರ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.

ಅಪ್ಪು ನಮ್ಮೊಂದಿಗೆ ಇಲ್ಲವಾದರೂ ಅವರ ನೆನಪಿಗಾಗಿ ಮಕ್ಕಳಿಂದ ಸಸಿ ನೆಡುವ ಕಾರ್ಯ ಮಾಡಲಾಗಿದೆ. ಈ ಹಸಿರು ಗಿಡದಂತೆ ಅಪ್ಪು ನೆನಪು ಕೂಡ ಸದಾ ಹಸಿರಾಗಿರಲಿ ಎಂಬುದು ಟ್ರಸ್ಟ್​ನ ಆಶಯವಾಗಿದೆ.

ABOUT THE AUTHOR

...view details