ಗಂಗಾವತಿ: ಚಾಕೊಲೆಟ್ ಸೇರಿದಂತೆ ಇತರೆ ತಿಂಡಿ ಪದಾರ್ಥಗಳನ್ನು ಕೊಂಡು ತಿನ್ನಲು ನೀಡಿದ್ದ ಹಣವನ್ನು ನಾಲ್ಕು ವರ್ಷದಿಂದ ಸಂಗ್ರಹಿಸಿದ್ದ ಮಕ್ಕಳು ರಾಮ ಮಂದಿರ ನಿರ್ಮಾಣಕ್ಕೆ ನೀಡುವ ಮೂಲಕ ಗಮನ ಸೆಳೆದ ಘಟನೆ ನಗರದಲ್ಲಿ ನಡೆಯಿತು.
ಚಾಕೊಲೆಟ್ಗೆ ನೀಡಿದ ಹಣವನ್ನು ರಾಮಮಂದಿರ ನಿರ್ಮಾಣಕ್ಕೆ ನೀಡಿದ ಮಕ್ಕಳು ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಕಾರ್ಯಾಲಯದಲ್ಲಿ ಅಯೋಧ್ಯೆ ರಾಮ ಮಂದಿನ ನಿರ್ಮಾಣಕ್ಕಾಗಿ ಹಮ್ಮಿಕೊಂಡಿದ್ದ ನಿಧಿ ಸಮರ್ಪಣಾ ಅಭಿಯಾನದಲ್ಲಿ ಈ ಮಕ್ಕಳು ಮಂದಿರ ನಿರ್ಮಾಣಕ್ಕೆ ತಾವು ಸಂಗ್ರಹ ಮಾಡಿದ್ದ ಹಣ ನೀಡಿದರು.
ಇದನ್ನೂ ಓದಿ:ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗೋಣ: ಸಚಿವ ಆನಂದ ಸಿಂಗ್ ಕರೆ
ಬನ್ನಿಗಿಡದ ಕ್ಯಾಂಪ್‌ನ ಸಂಸ್ಕೃತಿ ಎಂಬ ಐದು ವರ್ಷದ ಹೆಣ್ಣು ಮಗು, ವಿರಾಟ್ ಎಂಬ ಆರು ವರ್ಷದ ಬಾಲಕ ತಮ್ಮ ಪಾಲಕರು ನೀಡಿದ್ದ ಹಣವನ್ನು ಚಾಕೊಲೆಟ್ಗೆ ಬಳಸದೆ ಕಳೆದ ನಾಲ್ಕು ವರ್ಷದಿಂದ ಉಳಿತಾಯ ಮಾಡಿಟ್ಟಿದ್ದರು. ಮಕ್ಕಳಿಂದ ದೇಣಿಗೆ ಸ್ವೀಕರಿಸುವ ಮೂಲಕ ನಿಧಿ ಸಂಗ್ರಹಣಾ ಅಭಿಯಾನಕ್ಕೆ ಪ್ರಮುಖರು ಚಾಲನೆ ನೀಡಿದರು.