ಗಂಗಾವತಿ(ಕೊಪ್ಪಳ):ಊರಲ್ಲಿ ನಡೆಯುವ ಜಾತ್ರೆಗೆ ಎಂದು ಬಾಲಕಿ ಕರೆದೊಯ್ದು ಆಕೆಯ ಸಹೋದರ ಮಾವ, ಬಾಲಕಿಯನ್ನು ಬಲವಂತವಾಗಿ ಬಾಲ್ಯ ವಿವಾಹ ಮಾಡಿಕೊಟ್ಟ ಘಟನೆ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ನಡೆದಿದೆ.
ಊರ ಜಾತ್ರೆಗೆಂದು ಕರೆದೊಯ್ದ ಮಾವನಿಂದ ಬಾಲಕಿಗೆ ಬಲವಂತದ ಮದುವೆ! - ಗಂಗಾವತಿ ಸುದ್ದಿ
ಜಾತ್ರೆಗೆಂದು ಬಾಲಕಿಯನ್ನು ಕರೆದೊಯ್ದ ಆಕೆಯ ಸಹೋದರ ಮಾವನೇ ಬಲವಂತವಾಗಿ ಬಾಲ್ಯ ವಿವಾಹ ಮಾಡಿಕೊಟ್ಟ ಘಟನೆ ಕನಕಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ರಾಮದುರ್ಗ ಗ್ರಾಮದಲ್ಲಿ ನಡೆದಿದೆ.
![ಊರ ಜಾತ್ರೆಗೆಂದು ಕರೆದೊಯ್ದ ಮಾವನಿಂದ ಬಾಲಕಿಗೆ ಬಲವಂತದ ಮದುವೆ! Child marriage](https://etvbharatimages.akamaized.net/etvbharat/prod-images/768-512-8995627-thumbnail-3x2-gvt.jpg)
ಬಾಲ್ಯವಿವಾಹ
ಹದಿನೆಂಟು ವರ್ಷ ಪೂರ್ಣಗೊಳ್ಳದೇ ಬಾಲಕಿಯನ್ನು ವಿವಾಹ ಮಾಡಿಕೊಟ್ಟಿದ್ದರಿಂದ ಇದೀಗ ಬಾಲಕಿ ಸಹೋದರ ಮಾವ ಚಿಕ್ಕಮಾದಿನಾಳದ ಅಂಬಣ್ಣ ನಿಂಗಪ್ಪ ಮುರಾಡ್ಯಾರ ಹಾಗೂ ಮದುವೆ ಮಾಡಿಕೊಂಡ ಗದಗ ಜಿಲ್ಲೆಯ ಚಿಂಚಲಿ ಗ್ರಾಮದ ವಾಹನ ಚಾಲಕ ಹನುಮಂತ ಹೊಸಳ್ಳಿ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಕೊಪ್ಪಳ ಜಿಲ್ಲೆಯ ಗುಡದಳ್ಳಿ ಗ್ರಾಮದ ಬಾಲಕಿಯ ಜನ್ಮ ದಿನಾಂಕ 11.01.2003 ಇದ್ದು, 18 ವರ್ಷ ತುಂಬುವುದರೊಳಗೆ ಮದುವೆ ಮಾಡಿಕೊಡಲಾಗಿದೆ ಎಂದು ಕನಕಗಿರಿಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ವಾತಾ.ಎಸ್ ಇದೀಗ ಪೊಲೀಸರಿಗೆ ದೂರು ನೀಡಿದ್ದಾರೆ.