ಕೊಪ್ಪಳ: ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮ ಹಾಗೂ ಮಾತೃ ಭೂಮಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ಛತ್ರಪತಿ ಶಿವಾಜಿ ಹಿಂದೂ ಧರ್ಮ, ಮಾತೃ ಭೂಮಿ ಬಗ್ಗೆ ಅಪಾರ ಗೌರವ ಹೊಂದಿದ್ದರು: ಸಂಗಣ್ಣ ಕರಡಿ - MP Sanganna karadi koppala
ಛತ್ರಪತಿ ಶಿವಾಜಿ ಮಹಾರಾಜರು ಹಿಂದೂ ಧರ್ಮ ಹಾಗೂ ಮಾತೃ ಭೂಮಿಯ ಬಗ್ಗೆ ಅಪಾರ ಗೌರವ ಹೊಂದಿದ್ದರು ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಛತ್ರಪತಿ ಶಿವಾಜಿಯ ಜನನವಾಗದಿದ್ದರೆ ಹಿಂದೂ ರಾಷ್ಟ್ರ ನೋಡೋದು ಕಷ್ಟವಾಗುತ್ತಿತ್ತು ಎಂದು ಅಭಿಪ್ರಾಯಪಟ್ಟರು. ಮುಸ್ಲಿಂ ದಾಳಿಕೋರರು ನಮ್ಮ ದೇಶದ ದೇವಾಲಯಗಳು ಸೇರಿದಂತೆ ದೇಶದ ಸಂಪತ್ತನ್ನು ಕೊಳ್ಳೆ ಹೊಡೆದರು. ಆ ಸಂದರ್ಭದಲ್ಲಿ ದೇಶದ ಜನತೆ ಆತಂಕದಲ್ಲಿದ್ದರು. ಇಂತಹ ಕಾಲಘಟ್ಟದಲ್ಲಿ ಶಿವಾಜಿ ಜನನವಾಗುತ್ತದೆ. ಶಿವಾಜಿ ಮಹಾರಾಜರು ರಾಷ್ಟ್ರಭಕ್ತಿ ಹುಟ್ಟುಹಾಕಿದರು. ಮರಾಠ ಸಮುದಾಯ ರಾಷ್ಟ್ರ ಕಟ್ಟುವಲ್ಲಿ ಅಪಾರ ಕೊಡುಗೆ ನೀಡಿದೆ. ಇನ್ನು ಮರಾಠ ಸಮುದಾಯವನ್ನು 3 ಬಿಯಿಂದ 2 ಎಗೆ ಮೀಸಲಾತಿ ನೀಡುವ ಕುರಿತಂತೆ ಪ್ರಯತ್ನ ಮಾಡುತ್ತೇನೆ ಎಂದರು.
ಯಾವುದೇ ಸಮಾಜವಾಗಲಿ ಸರ್ಕಾರದ ಸೌಲಭ್ಯಗಳನ್ನು ಪಡೆಯಬೇಕೆಂದರೆ ಮೊದಲು ಸಂಘಟಿತವಾಗಬೇಕು. ಸಂಘಟನೆ, ಶಿಕ್ಷಣ ಹಾಗೂ ಹೋರಾಟಕ್ಕೆ ಒತ್ತು ನೀಡಬೇಕು. ಅದರಂತೆ ಮರಾಠ ಸಮುದಾಯವೂ ಸಹ ಸಂಘಟನೆ, ಶಿಕ್ಷಣ ಹಾಗೂ ಹೋರಾಟಕ್ಕೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.