ಕೊಪ್ಪಳ: ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗೊರವಪ್ಪ ವೇಷಧಾರಿಗಳನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಗೂಸಾ ನೀಡಿದ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಯಡ್ಡೋಣಿ ಗ್ರಾಮದಲ್ಲಿ ನಡೆದಿದೆ.
ದೇವರ ಹೆಸರಲ್ಲಿ ಗೊರವಪ್ಪ ವೇಷ, ಜನರಿಗೆ ಮೋಸ: ಗ್ರಾಮಸ್ಥರಿಂದ ಥಳಿತ
ದೇವರ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ಗೊರವಪ್ಪ ವೇಷಧಾರಿಗಳನ್ನು ಹಿಡಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಗೊರವಪ್ಪ ವೇಷಧಾರಿಗಳಿಗೆ ಗ್ರಾಮಸ್ಥರಿಂದ ಗೂಸಾ
ಮೈಲಾರಲಿಂಗೇಶ್ವರನ ಭಕ್ತರ ವೇಷದಲ್ಲಿ ಬರುತ್ತಿದ್ದ ಮೂರು ಜನ ವ್ಯಕ್ತಿಗಳು, ಯಡ್ಡೋಣಿ ಗ್ರಾಮದ ಮನೆ ಮನೆಗೆ ಬಂದು, ದೇವರ ಹೆಸರಲ್ಲಿ ಭಂಡಾರ ಹಚ್ಚಿ ವಶೀಕರಣ ಮಾಡಿಕೊಂಡು ಜನರಿಂದ ಹಣ ಕೀಳುತ್ತಿದ್ದರಂತೆ. ಗ್ರಾಮದ ಪ್ರತಿಯೊಬ್ಬರಿಂದಲೂ 500 ರಿಂದ 3,000 ಸಾವಿರ ರೂಪಾಯಿವರೆಗೂ ಹಣ ಪಡೆಯುತ್ತಿದ್ದರು ಎನ್ನಲಾಗಿದೆ.
ನಂತರ ಇವರ ಅಸಲಿ ಬಣ್ಣ ಅರಿತ ಗ್ರಾಮಸ್ಥರು ಹಿಡಿದು ಥಳಿಸಿ ಜನರು ನೀಡಿದ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ. ಅಲ್ಲದೆ, ಮತ್ತೆ ಈ ರೀತಿ ಮೋಸ ಮಾಡಿ ಬದುಕಬೇಡಿ ಎಂದು ಅವರನ್ನು ಬಿಟ್ಟು ಕಳಿಸಿದ್ದಾರೆ.