ಗಂಗಾವತಿ: ರಸ್ತೆ ನಿರ್ಮಾಣ ಕಾಮಗಾರಿಗೆ ಎಂದು ಕನಕಗಿರಿ ಕ್ಷೇತ್ರಕ್ಕೆ ಬಿಡುಗಡೆಯಾದ ನಾಲ್ಕು ಕೋಟಿ ರೂಪಾಯಿ ಮೊತ್ತದ ಅನುದಾನಕ್ಕೆ ಬೋಗಸ್ ಬಿಲ್ ಸೃಷ್ಟಿಸಿ ಸಂಪೂರ್ಣ ಹಣ ನುಂಗಿ ಹಾಕಲಾಗಿದೆ ಎಂದು ದಲಿತ ಮುಖಂಡ ಹುಸೇನಪ್ಪ ಆರೋಪಿಸಿದ್ದಾರೆ.
ಮಾಜಿ ಸಚಿವ ತಂಗಡಗಿಯಿಂದ ರಸ್ತೆ ಕಾಮಗಾರಿ ಹಣ ಗುಳುಂ: ದಲಿತ ಮುಖಂಡನ ಆರೋಪ - Dalit leader Hussainappa
ರಸ್ತೆ ನಿರ್ಮಾಣ ಕಾಮಗಾರಿಗೆ ಎಂದು ಕನಕಗಿರಿ ಕ್ಷೇತ್ರಕ್ಕೆ ಬಿಡುಗಡೆಯಾದ ನಾಲ್ಕು ಕೋಟಿ ರೂಪಾಯಿ ಹಣವನ್ನು ಬೋಗಸ್ ಬಿಲ್ ಸೃಷ್ಟಿಸಿ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಹುಸೇನಪ್ಪ ಆರೋಪಿಸಿದ್ದಾರೆ.
ಈ ಪ್ರಕರಣದಲ್ಲಿ ಮಾಜಿ ಸಚಿವ ಶಿವರಾಜ ತಂಗಡಗಿ, ಗುತ್ತಿಗೆದಾರ ಸಂಕ್ರಾಂತಿ ಪ್ರಸಾದ್ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಪಾತ್ರವಿದೆ. ಕೂಡಲೇ ಜಿಲ್ಲಾಧಿಕಾರಿ ಖಾಸಗಿ ಸಂಸ್ಥೆಯಿಂದ ಸ್ವತಂತ್ರ ತನಿಖೆ ಕೈಗೊಳ್ಳಬೇಕು.
20016 ರಲ್ಲಿ ರಾಯಚೂರು-ಕೊಪ್ಪಳ ಮುಖ್ಯ ರಸ್ತೆಯಲ್ಲಿನ ಮರಲನಹಳ್ಳಿಯಿಂದ ಸಿದ್ದಾಪುರದವರೆಗೆ ಆರು ಕಿ.ಮೀ. ರಸ್ತೆ ನಿರ್ಮಾಣ ಕಾಮಗಾರಿಗೆ ಎಂದು 4 ಕೋಟಿ ಬಿಡುಗಡೆಯಾಗಿತ್ತು. ಆದರೆ ಯಾವುದೇ ಕಾಮಗಾರಿ ಕೈಗೊಳ್ಳದೇ ಸಂಪೂರ್ಣ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಕಳೆದ ಎರಡು ವರ್ಷದಿಂದ ದೂರು ಸಲ್ಲಿಸಿದರು ಸಹ ಯಾವುದೇ ಪ್ರಯೋಜನವಾಗಿಲ್ಲ. ಇದಕ್ಕೆ ಸಂಬಂಧಿಸದಂತೆ ದಾಖಲೆ ಸಲ್ಲಿಸಲು ನಾನು ಸಿದ್ದ ಎಂದರು.