ಗಂಗಾವತಿ: ಚಂದ್ರಯಾನ-2ರ ಮಹತ್ವ ಮತ್ತು ಹೇಗೆಲ್ಲಾ ವಿಜ್ಞಾನಿಗಳು ಕೆಲಸ ಮಾಡಿದ್ದಾರೆ. ಅದರಿಂದ ಏನು ಪ್ರಯೋಜನ, ಪ್ರಾಯೋಗಿಕವಾಗಿ ರಾಕೆಟ್, ಲ್ಯಾಂಡರ್ಗಳು ಹೇಗೆ ಕೆಲಸ ಮಾಡುತ್ತವೆ ಎಂಬುವುದರ ಬಗ್ಗೆ ಗಂಗಾವತಿಯ ಮಹಾನ್ ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಗಂಗಾವತಿ ಅಂಗಳಕ್ಕಿಳಿದ ಚಂದ್ರಯಾನ -2... ಅದು ಹೇಗೆ ಸಾಧ್ಯ? - program for children in Gangavathi
ಕೊಪ್ಪಳದ ಗಂಗಾವತಿಯ ಮಹಾನ್ ಕಿಡ್ ಶಾಲೆಯಲ್ಲಿ ಮಕ್ಕಳಿಗೆ ಚಂದ್ರಯಾನ-2ರ ಮಹತ್ವ ಮತ್ತು ವಿಜ್ಞಾನಿಗಳ ಕಾರ್ಯದ ಬಗ್ಗೆ ತಿಳಿಸಿ ಕೊಡುವ ಸಲುವಾಗಿ ಮಕ್ಕಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಲಾಗಿತ್ತು.
ಥೇಟ್ ಚಂದ್ರಯಾನ್-2 ಮಾದರಿಯಲ್ಲಿ ರಾಕೆಟ್ ನಿರ್ಮಿಸಲಾಗಿತ್ತು. ಭೂಮಿ ಮತ್ತೊಂದು ಬದಿಯಲ್ಲಿ ಚಂದ್ರನನ್ನು ರಚಿಸಿ ದ್ರೋಣ್ ಮೂಲಕ ಹಾರಾಟ ನಡೆಸಿ, ಭೂಮಿಯಿಂದ ಚಂದ್ರನ ಮೇಲ್ಮೈ ಮೇಲೆ ಯಂತ್ರ ಇಳಿಸುವ ಮಾದರಿಯನ್ನು ಮಕ್ಕಳಿಗೆ ತೋರಿಸಿಕೊಡಲಾಯಿತು.
ಶಾಲೆಯ ವಿದ್ಯಾರ್ಥಿಗಳಾದ ಸಾತ್ವಿಕ್ ಗುರುವಿನ್ ಮಠ, ಚಂದ್ರಯಾನ-2ರ ತಾಂತ್ರಿಕ ವಿವರಣೆ ನೀಡಿದರು. ಜು.22ರಂದು ಶ್ರೀಹರಿಕೋಟಾದಿಂದ ಹೊರಟ ರಾಕೆಟ್ ಚಂದ್ರನಲ್ಲಿ ಇಳಿದು ಏನೆಲ್ಲ ಪರೀಕ್ಷಿಸಲಿದೆ. ಇದರಿಂದ ಭೂಮಿ ಮತ್ತು ಮನುಷ್ಯರಿಗೆ ಏನೆಲ್ಲಾ ಲಾಭವಾಗಲಿದೆ ಎಂಬ ಮಾಹಿತಿ ನೀಡಿದರು. ಮಹಾನ್ ಕಿಡ್ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ನೇತ್ರಾಜ್ ಗುರುವಿನ್ ಮಠ ಪ್ರಾಯೋಗಿಕ ಮಾದರಿ ಪ್ರಾಜೆಕ್ಟ್ನ ನೇತೃತ್ವ ವಹಿಸಿಕೊಂಡಿದ್ದರು.